ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಯುವ ಸಂಗಮ (ರಿ.) ಎಕ್ಕಾರು ವತಿಯಿಂದ ವನ ಮಹೋತ್ಸವ ಕಾರ್ಯಕ್ರಮ
Monday, July 8, 2024
ಎಕ್ಕಾರು:ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಯುವ ಸಂಗಮ (ರಿ.) ಎಕ್ಕಾರು ವತಿಯಿಂದ ವನ ಮಹೋತ್ಸವ ಕಾರ್ಯಕ್ರಮವು ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಸುತ್ತಮುತ್ತ ನಡೆಯಿತು.
ಎಕ್ಕಾರಿನ ವಿಜಯ ಯುವ ಸಂಗಮವು ತನ್ನ ರಜತ ಸಂಭ್ರಮದ ಸಂದರ್ಭ ಹತ್ತು ಸಾವಿರಕ್ಕೂ ಅಧಿಕ ಸಸಿಗಳನ್ನು ಬೆಳೆಸಿ ಸ್ಥಳೀಯ ಸಂಘಗಳು, ಶಾಲಾ ಕಾಲೇಜುಗಳಿಗೂ ನೀಡಿ ನೆಟ್ಟು ಬೆಳೆಸುವ ಮಹತ್ಕಾರ್ಯವನ್ನು ಮಾಡಿದೆ. ಬೀಜ ಬಿತ್ತನೆ, ವನ ಮಹೋತ್ಸವ ನಿರಂತರವಾಗಿ ಆಚರಿಸುತ್ತಾ ಬರುತ್ತಿದ್ದು ಈ ವರ್ಷ ಕಾರಣಿಕ ಕ್ಷೇತ್ರ ಎಕ್ಕಾರು ದೇರಿಂಜಗಿರಿ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಸುತ್ತ ಮುತ್ತ ಕಾಡು ಮರ, ಹಣ್ಣು ಹಂಪಲುಗಳು, ಹೂ ಬಿಡುವ ಮರಗಳು ಹೀಗೆ ಉತ್ತಮ ಯೋಜನೆಯೊಂದಿಗೆ ಗಿಡ ನೆಡುವ ಕಾರ್ಯಕ್ರಮ ನೆರವೇರಿಸಲಾಯಿತು. ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವ) ಇವರು ವೃಕ್ಷಾರೋಹಣ ಮಾಡುವ ಮುಖೇನ ಚಾಲನೆ ನೀಡಿದರು. ಈ ಸಂದರ್ಭ ದೈಹಿಕ ಶಿಕ್ಷಕ ದಯಾನಂದ ಮಾಡ ಎಕ್ಕಾರು, ವಿಜಯ ಯುವ ಸಂಗಮದ ಅಧ್ಯಕ್ಷ ಕಿಶೋರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಮನೀಶ್ ಶೆಟ್ಟಿ ಹಾಗು ಸಂಗಮದ ಪದಾಧಿಕಾರಿಗಳು, ಸದಸ್ಯರು ಇದ್ದರು.