-->


ಮಾನಂಪಾಡಿ ಶಾಲೆಗೆ ಎಂ ಆರ್ ಪಿ ಎಲ್ ನಿಂದ ಶೌಚಾಲಯ ಕೊಡುಗೆ

ಮಾನಂಪಾಡಿ ಶಾಲೆಗೆ ಎಂ ಆರ್ ಪಿ ಎಲ್ ನಿಂದ ಶೌಚಾಲಯ ಕೊಡುಗೆ


ಮೂಲ್ಕಿ: ಶಿಕ್ಷಣ ಸಂಸ್ಥೆ ಮತ್ತು ಉತ್ತಮ ಶಿಕ್ಷಣದೊಂದಿಗೆ ಸಂಸ್ಥೆಗೆ ಮೂಲಭೂತ ಸೌಕರ್ಯ ಒದಗಿಸುವುದು ಅಗತ್ಯವಾಗಿದ್ದು,  ಸರಕಾರಿ ಶಾಲೆಗಳಿಗೆ ಶೌಚಾಲಯದಂತಹ ಮೂಲಭೂತ ಸೌಕರ್ಯ ಒದಗಿಸುವ ಎಂ.ಆರ್.ಪಿ.ಎಲ್ ಸೌಕರ್ಯ ಅಭಿನಂದನೀಯ ಎಂದು  ಮಂಗಳೂರು ರಾಮಕೃಷ್ಣ ಅಶ್ರಮದ  ಶ್ರೀ ಜಿತಕಾಮಾನಂದಜಿ ಸ್ವಾಮೀಜಿ ಹೇಳಿದರು. ಅವರು ದ.ಕ.ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಮಾನಂಪಾಡಿ ಇಲ್ಲಿ ಎಂ ಆರ್ ಪಿ ಎಲ್ ಸಂಸ್ಥೆಯಿಂದ ನಿರ್ಮಿಸಿಕೊಟ್ಟ ಶೌಚಾಲಯವನ್ನು ಉದ್ಘಾಟಿಸಿ‌ ಮಾತನಾಡಿದರು. ಯಾವುದೇ ಒಂದು ಕಂಪನಿ ಪ್ರಾರಂಭವಾದರೆ ಆ ಕಂಪನಿಯ ಸುತ್ತಮುತ್ತದ ಗ್ರಾಮಗಳು ಅಭಿವೃದ್ದಿ ಹೊಂದುತ್ತದೆ ಎಂಬುದಕ್ಕೆ ಇದು ಉತ್ತಮ‌ ಉದಾಹರಣೆ.ಸಂಸ್ಥೆ ತನ್ನ ಸಿ.ಎಸ್.ಆರ್ ಅನುದಾನದಿಂದ ಅತ್ಯುತ್ತಮವಾಗಿ ಕೆಲಸ‌ ಮಾಡುತ್ತಿದೆ ಎಂದರು. ಎಂ.ಆರ್.ಪಿ.ಎಲ್ ನ ಮ್ಯಾನೇಜರ್ ಪ್ರಶಾಂತ್ ಬಾಳಿಗ ಮಾತನಾಡಿ ಎಂ ಆರ್ ಪಿ ಎಲ್ ತನ್ನ ಲಾಭದ ಒಂದು ಅಂಶವನ್ನು ಸಮಾಜಕ್ಕಾಗಿ ಮೀಸಲಿರಿಸಿದ್ದು, ಆರೋಗ್ಯ ಮತ್ತು ಶಿಕ್ಷಣ ಕಾರ್ಯಕ್ರಮಗಳಿಗೆ ಮುಖ್ಯವಾಗಿ ಒತ್ತು ನೀಡುತ್ತಿದ್ದೇವೆ.ಈ ಬಾರಿ   20 ಸರಕಾರಿ ಶಾಲೆಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದೇವೆ. ಜು. 1 ರಿಂದ ಜು. 15 ರವರೆಗೆ ಸಂಸ್ಥೆಯ ಸ್ವಚ್ಚತಾ ಪಕ್ವಾಡದ ಅಂಗವಾಗಿ ಜಿಲ್ಲೆಯಲ್ಲಿ ಸ್ಚಚ್ಚತೆಗೆ ಸಂಬಂಧಪಟ್ಟಂತೆ ವಿವಿಧ‌ ಕಾರ್ಯಕ್ರಮಗಳನ್ನು‌ ಹಮ್ಮಿಕೊಂಡಿದ್ದೇವೆ ಎಂದರು. ಈ ಸಂದರ್ಭ ನೂತನವಾಗಿ ಪ್ರಾರಂಭವಾದ  ಅಂಗ್ಲ ಮಾದ್ಯಮ ಶಾಲೆಗೆ ಉದ್ಯಮಿ ಸಂತೋಷ್ ಶೆಟ್ಟಿ ವತಿಯಿಂದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು. ಎಂ.ಆರ್.ಪಿ.ಎಲ್ ನ ಅಧಿಕಾರಿಗಳಾದ ಪ್ರಶಾಂತ್ ಬಾಳಿಗ, ಸ್ಟೀವನ್ ಪಿಂಟೋ ಮತ್ತು ಶೌಚಾಲಯ ಗುತ್ತಿಗೆದಾರ , ದೇವಣ್ಣ ನಾಯ್ಕ ಅವರನ್ನು ಗೌರವಿಸಲಾಯಿಸಲಾಯಿತು.  ಈ ಸಂದರ್ಭ ಅಧಿಕಾರಿಗಳಾದ ಸ್ಟೀವನ್ ಪಿಂಟೋ, ಶಾಲಾ ಮೇಲು ಉಸ್ತುವಾರಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, 
 ಅಂಗ್ಲ ಮಾದ್ಯಮಿ ಸಮಿತಿ ಅಧ್ಯಕ್ಷ   ವಿಶ್ವನಾಥ ಭಟ್, ಹಳೆವಿದ್ಯಾರ್ಥಿ ಸಂಘದ  ನಾರಾಯಣ ಶಣೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸುನೀಲ್ ಅಳ್ವ, ಮಾಜಿ ಸದಸ್ಯ ಉಮೇಶ್ ಮಾನಂಪಾಡಿ, ಉದ್ಯಮಿ ಸಂತೋಷ್ ಶೆಟ್ಟಿ, 
ಮೂಲ್ಕಿ ಕ್ಲಸ್ಟರ್ ನ  ಸಿ ಅರ್ ಪಿ  ವಿವಿಲ ಪಿಂಟೋ, ಗುತ್ತಿಗೆದಾರ ದೇವಣ್ಣ ನಾಯ್ಕ ಮತ್ತಿತರು ಉಪಸ್ಥಿತರಿದ್ದರು. ಅನಿತಾ ಲೀಸಿ  ಪಿಂಟೋ ಸ್ವಾಗತಿಸಿ, ಶಿಕ್ಷಕಿ ಶೋಭಾ ಧನ್ಯವಾದ ಸಮರ್ಪಿಸಿದರು. ವಸಂತಿ ಕುಮಾರಿ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article