ಕುಲವೂರು ಹಾಲು ಉತ್ಪಾದಕರ ಮಹಿಳಾ ಸಂಘದ ನೂತನ ಕಟ್ಟಡ ಉದ್ಘಾಟನೆ
Wednesday, July 17, 2024
ನೂತನ ಕಟ್ಟಡ 'ಕ್ಷೀರಧಾರೆ'ಯನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅವರು
ಸೋಮವಾರ ಉದ್ಘಾಟಿಸಿದರು.
ನೂತನ ಕಟ್ಟಡದ ಗೋದಾಮ ನ್ನು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ ಉದ್ಘಾಟಿಸಿದರು. ಸಭಾಂಗಣವನ್ನು
ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಉದ್ಘಾಟಿಸಿದರು.
ಒಕ್ಕೂಟದ ನಿರ್ದೇಶಕರುಗಳಾದ ಸುಧಾಕರ ರೈ,, ಶ್ರೀಮತಿ ಸುಭದ್ರಾ ರಾವ್, ಸವಿತಾ ಶೆಟ್ಟಿ, ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ. ರವಿರಾಜ್ ಉಡುಪ, ಉಪ ವ್ಯವಸ್ಥಾಪಕ ಡಾ. ಕೇಶವ ಸುಳ್ಳಿ, ಧರ್ಮಾಸ್ಟಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಐತಪ್ಪ, ನೂತನ ಕಟ್ಟಡ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ,
ಉಪಾಧ್ಯಕ್ಷಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷೆ ಶಕುಂತಲಾ ಜೈನ್, ಮುಖಂಡರಾದ ಪ್ರವೀಣ್ ಕುಮಾರ್ ಅಗರಿ, ಭವಾನಂದ ಶೆಟ್ಟಿ, ಮುತ್ತೂರು ಪಂಚಾಯತ್ ಉಪಾಧ್ಯಕ್ಷೆ ಸುಷ್ಮಾ ಸಂತೋಷ್, ಪಿಡಿಓ ಪ್ರಮೋದ್ ನಾಯ್ಕ್, ಸದಸ್ಯರುಗಳಾದ ಪುಷ್ಪಾ ನಾಯ್ಕ್,ಜಗದೀಶ್ ದುರ್ಗಾಕೋಡಿ, ಶಶಿಕಲಾ, ಮಾಲತಿ ಉಪಸ್ಥಿತರಿದ್ದರು.
ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಪ್ರವೀಣ್ ಆಳ್ವ, ವಿಜಯಕುಮಾರ್ ಶೆಟ್ಟಿ, ಒಕ್ಕೂಟದ ಮಾರುಕಟ್ಟೆ ಅಧಿಕಾರಿ ಜಾನೆಟ್ ರೋಜಾರಿಯೋ ಮತ್ತು ವಿಸ್ತರಣಾಧಿಕಾರಿ ಸರೋಜಿನಿ ಅವರುಗಳನ್ನು ವೇದಿಕೆಯಲ್ಲಿ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬೇರೆ ಬೇರೆ ಸಹಕಾರಿ ಸಂಘಗಳ ಪ್ರಮುಖರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ಸಂಘದ ಕಾರ್ಯನಿರ್ವಾಹಣಾಧಿಕಾರಿ ವಾಣಿ ವಿವೇಕ್ ಆಳ್ವ ಸಂಘದ ಪ್ರಗತಿಯ ವರದಿ ಮಂಡಿಸಿದರು. ಶ್ವೇತಾ ಸ್ವಾಗತಿಸಿದರು. ಸ್ಮಿತಾ ಮೆಲಾಂಟ ನಿರೂಪಿಸಿ, ನಮಿತಾ ವಂದಿಸಿದರು.