ಜು. 21 ರಂದು ಬೆಂಗಳೂರಿನಲ್ಲಿ ಕಿನ್ನಿಗೋಳಿ ವಿಜಯಾ ಕಲಾವಿದರ ತುಳು ನಾಟಕ ಪ್ರದರ್ಶನ
Wednesday, July 17, 2024
ಕಿನ್ನಿಗೋಳಿ:ಕಳೆದ 27 ವರ್ಷಗಳಿಂದ ತುಳು ರಂಗ ಭೂಮಿಯಲ್ಲಿ ಜನಪ್ರಿಯತೆ ಗಳಿಸಿರುವ ಕಿನ್ನಿಗೋಳಿ ವಿಜಯಾ ಕಲಾವಿದರ ಹರೀಶ್ ಪಡುಬಿದ್ರೆಯವರ,ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದ ತೊಟ್ಟಿಲ್ ತುಳು ನಾಟಕ ಪ್ರದರ್ಶನ ಜು. 21 ರಂದು ಬೆಂಗಳೂರಿನ ಬನ್ನೇರುಘಟ್ಟ ಮಾರ್ಗದ ವಿಜಯಾ ಬ್ಯಾಂಕ್ ಲೇ ಔಟ್ ನ ಮುಲ್ಕಿ ಸುಂದರರಾಮ ಶೆಟ್ಟಿ ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ ಪ್ರದರ್ಶನ ಗೊಳ್ಳಲಿದೆ.ಬೆಂಗಳೂರಿನ ಐಲೇಸಾ ದಿ ವಾಯ್ಸ್ ಆಫ್ ಓಷ್ಯನ್ ರವರ ಸಂಯೋಜನೆಯಲ್ಲಿ ಯಕ್ಷಗಾನ,ಪದರಂಗಿತ ಹಾಗೂ ನಾಟಕ ಪ್ರದರ್ಶನ ನಡೆಯಲಿದೆ. ಬೆಂಗಳೂರಿನ ಉದ್ಯಮಿ ಭವಾನಿಶಂಕರ ಶೆಟ್ಟಿ ಹಾಗೂ ಇತರ ಕಲಾ ಪೋಷಕರ ಸಹಕಾರದಿಂದ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರಾದ ವಿಶ್ವನಾಥ ಶೆಟ್ಟಿ ಪಳ್ಳಿ ಹಾಗೂ ಗೋಪಾಲ್ ಪೂಜಾರಿ ಪಟ್ಟೆ ತಿಳಿಸಿದ್ದಾರೆ.