ಲೈಟ್ ಹೌಸ್ ಬಳಿ ಧರೆಗುರುಳಿದ ಬೃಹತ್ ಗಾತ್ರದ ಮರ
Wednesday, July 17, 2024
ಹಳೆಯಂಗಡಿ : ಸತತ ಎರಡು ದಿವಸ ದಿಂದ ಸುರಿದ ಗಾಳಿ ಮಳೆಗೆ ಲೈಟ್ ಹೌಸ್ ಬಳಿ ಬೃಹತ್ ಗಾತ್ರದ ಮರವೊಂದು ಧರಶಾಹಿಯಾಗಿದ್ದು, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳಿಗೆ ತೊಂದರೆಯಾಗಿದೆ. ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಮೋಹನ್ ದಾಸ್ ತೋಕೂರು ಇವರ ಉಸ್ತುವಾರಿಯಲ್ಲಿ ಗ್ರಾಮದ ಸೋಮನಾಥ ಹಾಗೂ ತೋಕೂರು ಪ್ರಸಾದ ಆಚಾರ್ಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.