-->


ಜು.28ರಂದು ಬೆಂಗಳೂರಿನ ರಂಗಶಂಕರದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್‍ಸ್‌ನ ನಾಟಕ ಪ್ರದರ್ಶನ

ಜು.28ರಂದು ಬೆಂಗಳೂರಿನ ರಂಗಶಂಕರದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್‍ಸ್‌ನ ನಾಟಕ ಪ್ರದರ್ಶನ

ಮಂಗಳೂರು : ಪ್ರತಿಷ್ಠಿತ ಮಂಗಳೂರಿನ ಕಲಾಭಿ ಥಿಯೇಟರ್‍ಸ್‌ನ ಕಲಾವಿದರು ಪ್ರದರ್ಶಿಸಿ ಜನಮೆಚ್ಚುಗೆಗಳಿಸಿದ "ಎ ಫ್ರೇಂಡ್ ಬಿಯೋಂಡ್ ದಿ. ಫೆನ್ಸ್" ಕನ್ನಡ ನಾಟಕವು ಬೆಂಗಳೂರಿನ ಜೆ.ಪಿ.ನಗರದ ರಂಗಶಂಕರದಲ್ಲಿ ಜುಲೈ 28ರಂದು ಸಂಜೆ 3-30 ಮತ್ತು 7-30ಕ್ಕೆ ಎರಡು ಪ್ರದರ್ಶನ ನೀಡಲಿದೆ.
ಶ್ರವಣ್ ಹೆಗ್ಗೊಡು ನಿರ್ದೇಶನದಲ್ಲಿ ನೀನಾಸಂ ಕಲಾವಿದರು ಹೊಸ ಸಂಚಲನ ಮೂಡಿಸಲಿದ್ದಾರೆ. ಮಂಗಳೂರಿನ ಪುರಭವನದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡು ರಂಗಾಸಕ್ತರ ಮನಗೆದ್ದು, ಹೊಸ ಬಗೆಯ ನಾಟಕ ಎಂದು ಪ್ರಶಂಸಿಲ್ಪಟ್ಟಿದೆ. ನಾಟಕದಲ್ಲಿ ನೈಜ ಗಾತ್ರದ ಆನೆ, ಜಪಾನ್ ಬರ್ನಾಕು ಗೊಂಬೆಗಳು ಹಾಗೂ ವಿಶೇಷ ತಂತ್ರಗಳಿಂದ ಪ್ರೇಕ್ಷಕರನ್ನು ಆಕರ್ಷಿಸಲಿದೆ. ನೀನಾಸಂನ ಭುವನ್ ಮಣಿಪಾಲ್ ಮತ್ತು ಉಜ್ವಲ್ ತಮ್ಮ ತಂಡದೊಂದಿಗೆ ಅಭಿನಯಿಸಲಿದ್ದಾರೆ ಎಂದು ಕಲಾಭಿ ಸಂಸ್ಥೆಯ ಗೌರವಾಧ್ಯಕ್ಷ ಸುರೇಶ್ ಬಿ. ವರ್ಕಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article