-->


ಎಂಡೋಸಲ್ಫಾನ್ ಸಂತ್ರಸ್ಥರಿಗೆ  ಎಂ.ಅರ್ .ಪಿ.ಎಲ್ ನಿಂದ  ಕಿಟ್ ವಿತರಣೆ

ಎಂಡೋಸಲ್ಫಾನ್ ಸಂತ್ರಸ್ಥರಿಗೆ ಎಂ.ಅರ್ .ಪಿ.ಎಲ್ ನಿಂದ ಕಿಟ್ ವಿತರಣೆ

ಮಂಗಳೂರು: ಎಂ. ಆರ್.ಪಿ.ಎಲ್. ಸಂಸ್ಥೆಯು  ಜು. 1 ರಿಂದ 15 ರವರೆಗೆ ಸ್ವಚ್ಚತಾ ಪಾಕ್ಷಿಕ ಆಚರಿಸುತ್ತಿದ್ದು ಇದರ ಒಂದು ಭಾಗವಾಗಿ ಆರೋಗ್ಯ ಸುರಕ್ಷಾ ಅಭಿಯಾನವನ್ನು ಹಮ್ಮಿಕೊಂಡಿದ್ದು ,ಮೂಡಬಿದ್ರೆ ತಾಲೂಕಿನಲ್ಲಿನ ಎಂಡೋಸಲ್ಪಾನ್ ನಿಂದ ಹಾಸಿಗೆ ಹಿಡಿದ ರೋಗಿಗಳಿಗೆ ದಿನಬಳಕೆಯ ಮತ್ತು ಪೌಷ್ಟಿಕ ಆಹಾರದ ಕಿಟ್  ವಿತರಿಸಲಾಯಿತು. ಮೂಡಬಿದ್ರೆಯ ಮಾರೂರು, ಕಲ್ಲಬೆಟ್ಟು ನೀರಳಿಕೆಯ ಹಲವು ಕುಟುಂಬಗಳಿಗೆ ಕಿಟ್  ವಿತರಿಸಲಾಯಿತು. ನಂತರ ಮಾದ್ಯಮದೊಂದಿಗೆ  ಮಾಹಿತಿ ನೀಡಿದ ಎಂ.ಆರ್.ಪಿ.ಎಲ್ ಸಂಸ್ಥೆಯ  ಸಿ ಎಸ್ ಅರ್ ನ ಜನರಲ್ ಮೇನೆಜರ್ ಪ್ರಶಾಂತ್ ಬಾಳಿಗ  ಅವರು  ನಮ್ಮ ಸಂಸ್ಥೆ ಪ್ರತೀ ವರ್ಷ ಸ್ವಚ್ಚತಾ ಅಭಿಯಾನದ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಒಂದು ಭಾಗವಾಗಿ ಎಂಡೋಸಲ್ಪೊಅನ್ ಪೀಡಿತರಾಗಿದ್ದುಕೊಂಡು ಮಲಗಿದಲ್ಲೇ ಇರುವ ರೋಗಿಗಳಿಗೆ ದಿನಬಳಕೆ ಮತ್ತು ಪೌಷ್ಠಿಕ ಆಹಾರದ ಕಿಟ್  ನೀಡುತ್ತಿದ್ದೇವೆ. ಜಿಲ್ಲೆಯಲ್ಲಿ ಹಲವಾರು ಮಂದಿ ಎಂಡೋಸಲ್ಫಾನ್ ಸಂತ್ರಸ್ಥರಿದ್ದು ಇದರಲ್ಲಿ ಗಂಭೀರ ಪರಿಸ್ಥಿತಿ ಅಂದರೆ ಮಲಗಿದಲ್ಲೇ ಇರುವ ರೋಗಿಗಳಿಗೆ ಕಿಟ್  ವಿತರಿಸುತ್ತಿದ್ದೇವೆ. ಈ ಕಿಟ್  ನಲ್ಲಿ ಫಿನಾಯಿಲ್,  ಬ್ರೆಶ್, ಸೋಪ್ ಮತ್ತಿತರ ದಿನಬಳಕೆ ವಸ್ತುಗಳು ಮತ್ತು ರೋಗಿಗಳ ಆರೋಗ್ಯ ವೃದ್ದಿಗಾಗಿ ಗೇರುಬೀಜ, ಬಾದಾಮ್ ಮತ್ತಿತರ ಪೌಷ್ಠಿಕ ಆಹಾರಗಳು ಇದರಲ್ಲಿ ಒಳಗೊಂಡಿದೆ ಕಳೆದ ಬಾರಿಯೂ ಇಂತಹ ಕಿಟ್ ವಿತರಿಸಲಾಗಿದ್ದು ಮಾತ್ರವಲ್ಲದೆ ಸಂಸ್ಥೆಯು ಹಲವಾರು ಸಾಮಾಜಿಕ ಕಾರ್ಯಗಳನ್ನು ನಿರಂತರ ಮಾಡುತಿದೆ ಎಂದರು.
 ಎಂಡೋಸಲ್ಪಾನ್ ನೋಡೆಲ್ ಅಧಿಕಾರಿ  ಡಾ.ನವೀನ್ ಚಂದ್ರ ಮಾತನಾಡಿ ಪ್ರತೀ ವರ್ಷ ಎಂ.ಆರ್.ಪಿ.ಎಲ್ ಸಂಸ್ಥೆ ಎಂಡೋಸಲ್ಪಾನ್ ಸಂತ್ರಸ್ಥರಿಗೆ ದಿನಬಳಕೆ ಕಿಟ್ ವಿತರಿಸುತ್ತಿದ್ದು, ಕಳೆದ ಬಾರಿಯೂ ನೀಡಿದ್ದಾರೆ. ಇಂತಹ ಸಮಾಜ‌ಮುಖಿ‌ ಕಾರ್ಯ ಅಭಿನಂದನೀಯ ಎಂದರು. ಈ ಸಂದರ್ಭ ಎಂ.ಅರ್.ಪಿ.ಎಲ್. ಅಧಿಕಾರಿ
ಸ್ಟೀವನ್ ಪಿಂಟೋ , ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article