ಪಡುಪೆರಾರ ಪರಿಸರದಲ್ಲಿ ಚಿರತೆ ಹಾವಳಿ
Saturday, July 13, 2024
ಬಜಪೆ:ಪಡುಪೆರಾರ ಪರಿಸರದಲ್ಲಿ ಚಿರತೆ ಹಾವಳಿಯಿಂದ ಗ್ರಾಮದ ಜನರು ಭಯಭೀತರಾಗಿದ್ದಾರೆ.ಇಲ್ಲಿನ ಪುಚ್ಚಾಳ ಎಂಬಲ್ಲಿ ಸುಂದರ ಸಫಲಿಗ ಎಂಬುವವರ ಸಾಕು ನಾಯಿ ಮರಿಯನ್ನು ಚಿರತೆ ರಾತ್ರಿ ಹೊತ್ತೊಯ್ದಿದೆ. ನಾಯಿ ಮರಿಯನ್ನು ಚಿರತೆ ಹೊತ್ತೊಯ್ಯುವ ದೃಶ್ಯವು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಚಿರತೆಯ ಕಾಟದಿಂದ ಭಯಭೀತರಾಗಿರುವ ಗ್ರಾಮಸ್ಥರು ರಾತ್ರಿಯ ಸಮಯದಲ್ಲಿ ಹೋಗಲು ಹಿಂಜರಿಯುವಂತಾಗಿದೆ.ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆಯು ಇತ್ತ ಕಡೆ ಗಮನಹರಿಸಿಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.