-->


ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

 

ಬಜಪೆ:ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ವತಿಯಿಂದ ರಾಷ್ಟ್ರೀಯ ವಿದ್ಯುತ್ ಸಪ್ತಾಹ - 2024 ಅಂಗವಾಗಿ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮವು ಶನಿವಾರದಂದು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ನಡೆಯಿತು. ವಿದ್ಯುತ್ ಪರಿವೀಕ್ಷಣಾಲಯದ ಸಹಾಯಕ ಪರಿವೀಕ್ಷಕ ವಿರೂಪಣ್ಣ ಕುಂಬಾರ ಅವರು  ವಿದ್ಯುತ್ ಅಪಘಾತಗಳಿಂದ ಪ್ರತಿವರ್ಷ ಸಂಭವಿಸುವ ಹಾನಿಗಳು ಹಾಗೂ ಸುರಕ್ಷತಾ ಸಪ್ತಾಹದ ಆಚರಣೆಯ ಅಗತ್ಯತೆಯ ಬಗ್ಗೆ  ತಿಳಿಸಿದರು. 
ಮನೋಜ್ ಎಂ,    ಅವರು  ವಿದ್ಯುತ್ ಉಪಕರಣಗಳ ಸರಿಯಾದ ಬಳಕೆ,ವಿದ್ಯುತ್ ಬಳಕೆಯಲ್ಲಿ ಅನುಸರಿಸಬೇಕಾದ ವಿವಿಧ ಸುರಕ್ಷತಾ ಕ್ರಮಗಳು, ವಿದ್ಯುತ್ ವಾಹಕಗಳು ಹಾಗೂ ಅವಾಹಕಗಳನ್ನು ವಿದ್ಯುತ್ ಅಪಘಾತಗಳಲ್ಲಿ ಬಳಸುವ ಕುರಿತು ಸೂಕ್ತ ವಿವರಣೆ ಹಾಗೂ ವಿದ್ಯುತ್ ಸುರಕ್ಷತೆಗಾಗಿ ಮೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಬಳಸಲು ತಿಳಿಸಿದರು.ಮರಗಳು ಹಾಗೂ ವಿದ್ಯುತ್ ಕಂಬಗಳ ಅಡಿಯಲ್ಲಿ ಮಳೆಗಾಲದಲ್ಲಿ ನಿಲ್ಲುವುದು ಅಪಾಯಕಾರಿ, ವಿದ್ಯುತ್ ಕಂಬಗಳಿಗೆ ಸಾಕುಪ್ರಾಣಿಗಳನ್ನು ಕಟ್ಟುವುದು, ತುಂಡಾದ, ಹೊರಕವಚ ಹರಿದ ತಂತಿಗಳನ್ನು ಮುಟ್ಟದೇ ಇರುವ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ನೀಡಿದರು. ವಿದ್ಯುತ್ ಅಪಘಾತಗಳ ಸಂದರ್ಭದಲ್ಲಿ ಪ್ರಥಮ ಚಿಕತ್ಸೆಗೆ ಒಣಗಿದ ಮರದ ಹಲಗೆ ಬಳಸುವ ಬಗ್ಗೆ, ಕೃತಕ ಉಸಿರಾಟದ  ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ  ಮಾಹಿತಿ ನೀಡಿದರು. 

  ಉಪ ವಿದ್ಯುತ್ ಪರಿವೀಕ್ಷಕ ಸುರೇಂದ್ರ,ಅಧಿಕ್ಷಕ ಪೃಥ್ವಿರಾಜ್‌ ಸಿ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪೂರ್ಣಿಮ ಹೆಚ್. ಎಂ.,ಶಿಕ್ಷಕಿಯರಾದ ಜ್ಯೋತಿ ಬಿ., ರಾಜಶ್ರೀ, ವಿದ್ಯಾಲತಾ, ವಿನ್ನಿ ನಿರ್ಮಲ ಡಿಸೋಜ,ಜಯಂತಿ ಎಂ.,ಶಿಕ್ಷಕ ಡಾ. ಅನಿತ್ ಕುಮಾರ್ ಉಪಸ್ಥಿತರಿದ್ದರು.   

ಶಿಕ್ಷಕಿ ವಿದ್ಯಾಗೌರಿ ಎಂ.ಕೆ ಸ್ವಾಗತಿಸಿದರು, ಚಿತ್ರಾಶ್ರೀ ಕೆ.ಎಸ್.ದನ್ಯವಾದವಿತ್ತರು.

Ads on article

Advertise in articles 1

advertising articles 2

Advertise under the article