ದಕ್ಷಿಣ ಭಾರತ ವಲಯ ಮಟ್ಟದ ಖೋ ಖೋ ಪಂದ್ಯಾವಳಿಗೆ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನ ಬಾಲಕಿಯರ ತಂಡ ಆಯ್ಕೆ
Tuesday, June 18, 2024
ಎಕ್ಕಾರು :ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಮಂಗಳೂರು ತಾಲೂಕು ಇಲ್ಲಿನ ಬಾಲಕಿಯರ ಖೋ ಖೋ ತಂಡವು ಹೆಚ್ ಸಿ ಎಲ್ ಫೌಂಡೇಶನ್ ಇವರು ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಂಘಟಿಸಿದ ರಾಜ್ಯಮಟ್ಟದ ಸ್ಪೋರ್ಟ್ಸ್ ಫೋರ್ ಚೇಂಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಜೂ.20 ರಂದು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯ ಗುಂಟೂರು ಇಲ್ಲಿ ನಡೆಯುವ ದಕ್ಷಿಣ ಭಾರತ ವಲಯ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿರುವರು. ತಂಡದ ತರಬೇತುದಾರರಾದ ಶ್ರೀಮತಿ ವಿದ್ಯಾಲತಾ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್. ರಾವ್ ,ತಂಡದ ವ್ಯವಸ್ಥಾಪಕ ಡಾ. ಅನಿತ್ ಕುಮಾರ್ ಹಾಗೂ ಕ್ರೀಡಾಪಟುಗಳಾದ ದರ್ಶಿನಿ (ತಂಡದ ನಾಯಕಿ), ದೀಕ್ಷಾ, ಸ್ಮಿತಾ, ಹರ್ಷಿತ ವಿಂತಿ ಬಿ ಶೆಟ್ಟಿ, ಭೂಮಿಕ ಹೆಗಡೆ ತನ್ವೀ ಪೂಜಾರಿ, ಸಮೀಕ್ಷಾ,ರಕ್ಷಿತಾ ಜೊತೆಗಿದ್ದರು.