ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರಿನಲ್ಲಿ ವಿಶ್ವ ಪರಿಸರದಿನಾಚರಣೆ
Wednesday, June 5, 2024
ಎಕ್ಕಾರು :ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು ಮಂಗಳೂರು ಉತ್ತರ ಇಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬುಧವಾರದಂದು ಆಚರಿಸಲಾಯಿತು. ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರದ ಕ್ಷೇತ್ರ ಸಮನ್ವಯಾಧಿಕಾರಿ ಉಸ್ಮಾನ್ ಜಿ.ಅವರು ಶಾಲಾ ಪರಿಸರದಲ್ಲಿ ಸಸಿಗಳನ್ನು ನೆಡುದರ ಮೂಲಕ ವಿಶ್ವ ಪರಿಸರ ದಿನಕ್ಕೆ ಚಾಲನೆಯನ್ನು ನೀಡಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಕ್ವಿಜ್, ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಎಕ್ಕಾರು ಕ್ಲಸ್ಟರ್ ನ ಶ್ರೀಮತಿ ವಿನೋದ, ಸುರತ್ಕಲ್ ಕ್ಲಸ್ಟರ್ ನ ರಾಮದಾಸ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್ ರಾವ್, ಕಾರ್ಯಕ್ರಮದ ಸಂಘಟಕರು ಹಾಗೂ ಪರಿಸರ ಸಂಘದ ಸಂಚಾಲಕಿ ,ಶಿಕ್ಷಕಿ ಶ್ರೀಮತಿ ರಮ್ಯಾ ,ಪ್ರಮುಖರುಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ,ಉಪಸ್ಥಿತರಿದ್ದರು.