-->

ಯಕ್ಷಗಾನದಿಂದ ಸಾಂಸ್ಕೃತಿಕ ಪರಂಪರೆ ಉಳಿದಿದೆ  - ಅಜಿತ್ ಕೆರೆಕಾಡು

ಯಕ್ಷಗಾನದಿಂದ ಸಾಂಸ್ಕೃತಿಕ ಪರಂಪರೆ ಉಳಿದಿದೆ - ಅಜಿತ್ ಕೆರೆಕಾಡು


ಮೂಲ್ಕಿ:ಯಕ್ಷಗಾನ ಕಲೆಯಿಂದ ಇಂದು ಸಾಂಸ್ಕೃತಿಕ ಪರಂಪರೆ ಉಳಿದಿದ್ದು ಈ ಕಲೆಯಲ್ಲಿ ಹೆಚ್ಚೆಚ್ಚು ಮಕ್ಕಳನ್ನು ತೊಡಗಿಸಿಕೊಂಡು, ಕಲಾ ಪ್ರಾಕಾರಗಳಲ್ಲಿ ಯಕ್ಷಗಾನದ ಮಹತ್ವವನ್ನು ತಿಳಿಹೇಳಬೇಕು, ಇದರಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸ್ಥೈರ್ಯಗಳು ಹೆಚ್ಚು ಸಧೃಢಗೊಳ್ಳುತ್ತದೆ ಎಂದು ಉದ್ಯಮಿ ಅಜಿತ್ ಕೆರೆಕಾಡು ಹೇಳಿದರು. 
ಅವರು ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ಇದರ ಸಂಯೋಜನೆಯಲ್ಲಿ ನಡೆದ ಒಡ್ಡೋಲಗ ಯಕ್ಷಗಾನ ವಿಶೇಷ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ಶ್ರೀ ಕ್ಷೇತ್ರ ದೇಂದಡ್ಕದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಅವರು ಆಶೀರ್ವಚನ ನೀಡಿದರು. 
ಕೆರೆಕಾಡು ಯಕ್ಷಕಲಾ ಫೌಂಡೇಶನ್‌ನ ಅಧ್ಯಕ್ಷ ಜಯಂತ್ ಅಮೀನ್ ಅಧ್ಯಕ್ಷತೆಯನ್ನು ವಹಿಸಿದ್ದರು. 
ಕೆರೆಕಾಡು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕೆರೆಕಾಡು, ಯಕ್ಷಗಾನ ಕಲಾವಿದರಾದ ಜಿತೇಶ್ ಕುಲಾಲ್ ಸೂರಿಂಜೆ, ಶ್ರೀಪಾದ್ ಭಟ್, ಫೌಂಡೇಶನ್‌ನ ದುರ್ಗಾಪ್ರಸಾದ್. ರೇಷ್ಮಾ ಗಣೇಶ್, ಪ್ರೇಮಲತಾ, ಅಭಿಜಿತ್, ಅಜಿತ್, ಅನ್ವಿತ, ವಾಣಿ. ವಿಜೇತ ಶೆಟ್ಟಿ. ಉಷಾ ಪರಮೇಶ್ವರ. ಶ್ರೇಯಸ್, ನೀಲೇಶ್ ಆಚಾರ್ಯ, ಶಶಾಂಕ್, ದಿವ್ಯಶ್ರೀ, ಸಮೀಕ್ಷಾ, ನರೇಶ್ ಉಪಸ್ಥಿತರಿದ್ದರು
ಮೂಕಾಂಬಿಕಾ ಸ್ವಾಗತಿಸಿದರು,  ಧನಂಜಯ ಶೆಟ್ಟಿಗಾರ್ ಪ್ರಸ್ತಾವನೆಗೈದರು, ಯಶೋಧ ಅಜಿತ್ ವಂದಿಸಿದರು, ಉಷಾ ನರೇಂದ್ರ ನಿರೂಪಿಸಿದರು. 

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807