ಮಾನಸಿಕ ಅಸ್ವಸ್ಥನಿಂದ ವಾಹನಗಳಿಗೆ ಕಲ್ಲುತೂರಾಟ ,ಆಸ್ಪತ್ರೆಗೆ ದಾಖಲು
Wednesday, June 12, 2024
ಮೂಲ್ಕಿ: ಕಲ್ಲಾಪುವಿನ ರೈಲ್ವೇ ಕ್ರಾಸಿಂಗ್ನಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲು ತೂರಾಟ ನಡೆಸುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಮೂಲ್ಕಿ ಪೊಲೀಸರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೈಲ್ವೇ ಹಳಿಯ ಮೇಲೆ ಮಲಗಿ ಹತ್ತಿರ ಹೋದವರ ಮೇಲೆ ಕಲ್ಲುಗಳನ್ನು ಬಿಸಾಡಿ, ವಿವಸ್ತ್ರನಾಗಿ ಪರಿಸರದಲ್ಲಿ ಅಶಾಂತಿ ಉಂಟುಮಾಡಿದ್ದವನ್ನು ತುಕಾರಾಮ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಈತ ಮಾಹಿತಿ ನೀಡುವಂತೆ ತಂದೆ ಪೂವಪ್ಪ ಶೆಟ್ಟಿಗಾರ್, ನಿಟ್ಟೆ ಕಾರ್ಕಳ ಎಂದು ಹೇಳಿಕೊಂಡಿದ್ದು ಸಂಬಂಧಿಸಿದವರು ಇದ್ದಲ್ಲಿ ಮೂಲ್ಕಿ ಪೊಲೀಸರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.