-->

ಜೈ ತುಳುನಾಡ್ ಸಂಘಟನೆಯ  ಅಧ್ಯಕ್ಷರಾಗಿ ಉದಯ್ ಪೂಂಜ ತಾಳಿಪಾಡಿಗುತ್ತು ಆಯ್ಕೆ

ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷರಾಗಿ ಉದಯ್ ಪೂಂಜ ತಾಳಿಪಾಡಿಗುತ್ತು ಆಯ್ಕೆ

ಮುಲ್ಕಿ : ಜೈ ತುಳುನಾಡ್ ಸಂಘಟನೆಯ ಮಹಾಸಭೆ ಮತ್ತು ಪದಗ್ರಹಣ ಸಮಾರಂಭವು  ಮುಲ್ಕಿಯ  ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆಯಿತು. ಈ   ಸಂದರ್ಭ  ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು. 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದಯ್ ಪೂಂಜ ತಾಳಿಪಾಡಿ ಗುತ್ತು , ಉಪಾಧ್ಯಕ್ಷರುಗಳಾಗಿ ಹರಿಶ್ಚಂದ್ರ ಗೋಪಾಲ ಕುಂದರ್ ಕರ್ನಿರೆ,  ವಿನೋದ ಪ್ರಸಾದ್ ರೈ ಕಾಸರಗೋಡು, ಪ್ರಧಾನ ಕಾರ್ಯದರ್ಶಿಯಾಗಿ  ಪೂರ್ಣಿಮಾ ಬಂಟ್ವಾಳ, ಜೊತೆ ಕಾರ್ಯದರ್ಶಿಗಳಾಗಿ  ಪೃಥ್ವಿ ತುಲುವೆ,  ಪ್ರಜ್ಞಾಶ್ರೀ ಎಂ ಕೊಡವೂರು, ಕೋಶಧಿಕಾರಿಯಾಗಿ ರಾಜಶ್ರೀ ಚಂದ್ರಶೇಖರ್ ತಲಪಾಡಿ, ಜೊತೆ
ಕೋಶಾಧಿಕಾರಿಯಾಗಿ ನಿಶಿಲ್ ಶೆಟ್ಟಿ ಬೇಲಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಎನ್ ಎಸ್ ಕಟಪಾಡಿ, ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಚಿತ್ರಾಕ್ಷಿ ಮುಗೇರ ತೆಗ್ಗು, ತುಳು ಲಿಪಿ ಸಮಿತಿ ಯ ಮೇಲ್ವಿಚಾರಕರಾಗಿ ಜಗದೀಶ ಗೌಡ ಕಲ್ಕಳ , ಚಿರಶ್ರೀ, ಪ್ರಚಾರ ಸಮಿತಿ ಮೇಲ್ವಿಚಾರಕರಾಗಿ ದಿವ್ಯ ಅಂಚನ್ ಪಕ್ಷಿಕೆರೆ ಆಯ್ಕೆಯಾದರು. ಈ ಸಂಧರ್ಭ   ಮಾಜಿ ಅಧ್ಯಕ್ಷ ವಿಶು ಶ್ರೀಕೆರ ವಿವಿಧ ಘಟಕಗಳ  ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

2023-24ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಕಿರಣ್ ತುಲುವೆ ವಾಚಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807