ಕಿನ್ನಿಗೋಳಿ:ಜೂ - 8,9,15 ಶಿವಪ್ರಾಣಮ್ ದಶ ಸಂಭ್ರಮ
Thursday, June 6, 2024
ಕಿನ್ನಿಗೋಳಿ:ಶಿವಪ್ರಾಣಮ್ , ನೃತ್ಯ ಸಂಸ್ಥೆ ಕಿನ್ನಿಗೋಳಿ ಇದರ ದಶ ಸಂಭ್ರಮದ ಕಾರ್ಯಕ್ರಮವು ಯುಗಪುರುಷ ಕಿನ್ನಿಗೋಳಿ ಇವರ ಸಹಕಾರದೊಂದಿಗೆ 3 ದಿನದ ಸರಣಿ ನೃತ್ಯ ಕಾರ್ಯಕ್ರಮವು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜೂ 8, 9 ಮತ್ತು 15 ರಂದು ನಡೆಯಲಿದೆ.
ಜೂ. 8 ರಂದು ಡಾ.ಹರಿಕೃಷ್ಣ ಪುನರೂರು ಉದ್ಘಾಟಸಿ ಮುಖ್ಯ ಅತಿಥಿಯಾಗಿ ಶ್ರೀ ಭುವನಾಭಿರಾಮ ಉಡುಪ ಹಾಗೂ ಗುರು ಶ್ರೀಧರ ಹೊಳ್ಳ ಮತ್ತು ಗುರು ವಿದುಷಿ ಶ್ರೀಮತಿ ಪ್ರತೀಮಾ ಶ್ರೀಧರ ಇವರ ಗೌರವ ಉಪಸ್ಥಿತಿಯಲ್ಲಿ ಯುವ ಕಲಾವಿದರಾದ ವಿದುಷಿ ಶ್ರೀಮತಿ ಪ್ರಕ್ಷಿಲಾ ಜೈನ್, ವಿದುಷಿ ಅಂಕಿತ ರೈ, ಅದಿತಿ ಲಕ್ಷ್ಮಿ, ಪೂರ್ವಿಕ ಹಾಗೂ ಗಾರ್ಗಿ ದೇವಿ ನೃತ್ಯಕಾರ್ಯಕ್ರಮ ನೀಡಲಿದ್ದಾರೆ.
ಜೂ. 9 ರಂದು ಶ್ರೀಮತಿ ಅನ್ನಪೂರ್ಣ ರಿತೇಶ್ ಇವರ ನಿರ್ದೇಶನದಲ್ಲಿ ಶಿವಪ್ರಾಣಮ್ , ನೃತ್ಯ ಸಂಸ್ಥೆ ಕಿನ್ನಿಗೋಳಿ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲ್ಲಿದ್ದು ಈ ಕಾರ್ಯಕ್ರಮವನ್ನು ಭರತಾಂಜಲಿ ಸಂಸ್ಥೆಯ ಗುರು ಶ್ರೀಧರ ಹೊಳ್ಳ ಮತ್ತು ಗುರು ವಿದುಷಿ ಶ್ರೀಮತಿ ಪ್ರತೀಮಾ ಶ್ರೀಧರ್ ಉದ್ಘಾಟನೆ ಮಾಡಲಿ ದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಭುವನಾಭಿರಾಮ ಉಡುಪ, ಶ್ರೀ ದುಗ್ಗಣ್ಣ ಸಾವಂತರು, ಡಾ. ಅರುಣ್ ಉಳ್ಳಾಲ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಜೂ. 15 ರಂದು “ಶಾಂತಲಾ ನಾಟ್ಯ” ಪ್ರಶಸ್ತಿ ಪುರಸ್ಕೃತ ಶ್ರೀ ಗುರು ಉಳ್ಳಾಲ ಮೋಹನ ಕುಮಾರ ಹಾಗೂ “ಕರ್ನಾಟಕ ಕಲಾಶ್ರೀ” ಗುರು ಶ್ರೀಮತಿ ಕಮಲಾ ಭಟ್ ಇವರಿಂದ ದೀಪ ಪ್ರಜಲ್ವನೆಗೊಂಡು ಮುಖ್ಯ ಅತಿಥಿಗಳಾಗಿ ಶ್ರೀ ಭುವನಾಭಿರಾಮ ಉಡುಪ , ಶ್ರೀ ಮಾಧವ ಶೆಟ್ಟಿಗಾರ್ ಹಾಗೂ ಗುರು ಶ್ರೀಧರ್ ಹೊಳ್ಳ ಮತ್ತು ಗುರು ವಿದುಷಿ ಶ್ರೀಮತಿ ಪ್ರತೀಮಾ ಶ್ರೀಧರ್ ಇವರ ಗೌರವ ಉಪಸ್ಥಿತಿಯಲ್ಲಿ ಪುಣ್ಯ ಡ್ಯಾನ್ಸ್ ಕಂಪೆನಿಯ ನಿರ್ದೇಶಕರಾದ ಶ್ರೀ ಪಾರ್ಶ್ವನಾಥ ಉಪಾಧ್ಯಾ ಯ ಬೆಂಗಳೂರು ಮತ್ತು ಆದಿತ್ಯ ಜಿ. ಎಸ್, ಬೆಂಗಳೂರು , ಜಾನ್ಕಿ ಡಿ.ವಿ , ಶ್ರೇಯ.ಜಿ ಇವರು ನೃತ್ಯ ಕಾರ್ಯಕ್ರಮ ನೀಡಲ್ಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ಕಲಾವಿದರನ್ನು ಪ್ರೊತ್ಸಾ ಯಿಸಬೇಕಾಗಿ ಶಿವಪ್ರಾಣಮ್ , ನೃತ್ಯ ಸಂಸ್ಥೆ ಕಿನ್ನಿಗೋಳಿಯ ನಿರ್ದೇಶಕರಾದ ಶ್ರೀಮತಿ ಅನ್ನಪೂರ್ಣ ರಿತೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.