-->

ಮುಂಡಾಳ ಸಮಾಜದ ನೂತನ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ  ಸದಾಶಿವ ಕುಂದರ್ ಆಯ್ಕೆ

ಮುಂಡಾಳ ಸಮಾಜದ ನೂತನ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಸದಾಶಿವ ಕುಂದರ್ ಆಯ್ಕೆ

ಹಳೆಯಂಗಡಿ:ಪರಿಶಿಷ್ಟ ಜಾತಿ ಮುಂಡಾಳ ಸಮಾಜ ಬಾಂಧವರ ಸಾಮಾಜಿಕ,ಶೈಕ್ಷಣಿಕ ಮತ್ತು ಔದ್ಯೋಗಿಕ ವಿಚಾರಧಾರೆಗಳಿಗೆ ಸಹಕಾರಿಯಾಗುವಂತೆ ಆಸುಪಾಸಿನ ಗ್ರಾಮಗಳ ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ನೂತನ ಕಟ್ಟಡ ಸಮಿತಿಯನ್ನು ಶ್ರೀ ಓಂಕಾರೇಶ್ವರಿ ಮಂದಿರ ತೋಕೂರು ಇದರ ಅಧ್ಯಕ್ಷ  ಸದಾಶಿವ ಕುಂದರ್ ರವರ ಅಧ್ಯಕ್ಷತೆಯಲ್ಲಿ  ನೆರವೇರಿತು.
ಕಟ್ಟಡ ಸಮಿತಿಯ ನೂತನ ಅಧ್ಯಕ್ಷರಾಗಿ  ಸದಾಶಿವ ಕುಂದರ್ ಅವರನ್ನು ಆಯ್ಕೆ ಮಾಡಲಾಯಿತು. 
ಉಪಾಧ್ಯಕ್ಷರಾಗಿ ಶ್ರೀಧರ ಕೆಮ್ರಾಲ್,
ಪ್ರಧಾನ ಕಾರ್ಯದರ್ಶಿಯಾಗಿ ಹಿಮಕರ್,
ಜೊತೆ ಕಾರ್ಯದರ್ಶಿಯಾಗಿ  ಸೀತಾರಾಮ್ ಸಾಲ್ಯಾನ್,
ಕೋಶಾಧಿಕಾರಿಯಾಗಿ  ಶಂಕರ್ ಮಾಸ್ಟರ್, ಆಂತರಿಕ ಲೆಕ್ಕ ಪರಿಶೋಧಕರಾಗಿ  ಸುಕುಮಾರ್ ಮಾಸ್ಟರ್, ಸಮಿತಿ ಸದಸ್ಯರಾಗಿ ಸಂಕಪ್ಪ ಎಂ,  ಗೌರೀಶ್,  ಸಂಜೀವ ಕರ್ಕೇರ, ಕುಮಾರಿ ಸುಜಾತ,  ಸದಾಶಿವ ಸಾಲ್ಯಾನ್, ನಾಗೇಶ್ ಸಾಲ್ಯಾನ್, ಶ್ರೀಮತಿ ಪುಷ್ಪ ರವರನ್ನು ಆಯ್ಕೆ ಮಾಡಲಾಯಿತು

 ಹಿಮಕರ್  ಅವರು ಕಾರ್ಯಕ್ರಮ  ನಿರೂಪಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807