-->
ಮಳಲಿ ಮಟ್ಟಿ ಜೋಗಿಮಠ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ದೃಡ ಕಲಶೋತ್ಸವ

ಮಳಲಿ ಮಟ್ಟಿ ಜೋಗಿಮಠ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ದೃಡ ಕಲಶೋತ್ಸವ

ಕೈಕಂಬ : ಮಳಲಿ ಮಟ್ಟಿ ಜೋಗಿಮಠ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ದೃಡ ಕಲಶೋತ್ಸವವು ಶನಿವಾರದಂದು ವಿಜೃಂಭಣೆಯಿಂದ   ಸಂಪನ್ನಗೊಂಡಿತು. ದೇವಸ್ಥಾನದ ಪ್ರಧಾನ ಅರ್ಚಕ ಉಮೇಶ್ ನಾಥ್ ಕದ್ರಿ ನೇತೃತ್ವದಲ್ಲಿ  ಸಹ ಅರ್ಚಕ ಯೋಗೀಶ್ ಮತ್ತು ಅರ್ಚಕ ವೃoದವರಿಂದ ದೃಡ ಕಲಶದ ವಿಧಿವಿಧಾನಗಳು ನೆರವೇರಿದವು.  ಮಹಾಪೂಜೆ ಅನ್ನಸಂತರ್ಪಣೆ  ಹಾಗೂ  ರಾತ್ರಿ 7 ಗಂಟೆಯಿಂದ ಭಜನಾ ಸಂಕೀರ್ತನೆ, ರಂಗಪೂಜೆ, ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.  ದೇವಸ್ಥಾನದ ಆಡಳಿತ ಮೊಕ್ತೇಸರ ಗಂಗಾಧರ್ ಜೋಗಿ ಮಟ್ಟಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶೇಖರ್ ಜೋಗಿ ಮಟ್ಟಿ,  ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸತೀಶ್ ಜೋಗಿ ಮಾಲೆಮಾರ್, ಅಧ್ಯಕ್ಷ ಕಿರಣ್ ಪಕ್ಕಳ ಪೆರ್ಮಂಕಿ ಗುತ್ತು,
 ಕಾರ್ಯಾಧ್ಯಕ್ಷ  ಚಂದ್ರಹಾಸ ಶೆಟ್ಟಿ ನಾರಳ, ಪ್ರಧಾನ ಕಾರ್ಯದರ್ಶಿ ಹರೀಶ್ ಮಟ್ಟಿ, ಕೋಶಾಧಿಕಾರಿ ಶೋಹನ್ ಅತಿಕಾರಿ, ಮತ್ತು ವಿನಯ್ ಪೂಜಾರಿ ಮೇಗಿನ ಮನೆ, ಮೋಹನ್ ಜೋಗಿ, ಕುಮಾರ್ ಚಂದ್ರ ಶೆಟ್ಟಿ, ಸಚಿನ್ ಸಾಲ್ಯಾನ್, ನಂದಕಿಶೋರ್, ಹರೀಶ್ ಜೋಗಿ, ರತನ್ ಜೋಗಿ, ಪ್ರಕಾಶ್ ಜೋಗಿ, ಸುರೇಶ್ ಜೋಗಿ ಮತ್ತು  ಬ್ರಹ್ಮ ಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಉಪಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರುಗಳು, ಬಡಗುಳಿಪಾಡಿ, ತೆಂಕುಳಿಪಾಡಿ ಮತ್ತು ಮೊಗರು ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article