-->


ಕಟೀಲು ಶಾಲೆಯಲ್ಲಿ ಪುಸ್ತಕ ವಿತರಣೆ

ಕಟೀಲು ಶಾಲೆಯಲ್ಲಿ ಪುಸ್ತಕ ವಿತರಣೆ


ಕಟೀಲು :  ಕಟೀಲು ಸ್ಪೋರ್ಟ್& ಗೇಮ್ಸ್ ಕ್ಲಬ್‌ ನ  ಸಹಯೋಗದೊಂದಿಗೆ ದಿ| ಕುಟ್ಟಿ ಮತ್ತು ಪ್ರೇಮ ಕೆ.ಶೆಟ್ಟಿ ಮತ್ತು ದಿ| ನಾಗಪ್ಪ ಶೇಟ್ಟಿ ಮತ್ತು ಕುಸುಮ ಶೆಟ್ಟಿ ಶಿವಕುಮಾರ್ ಮತ್ತು ಹೇಮಲತಾ ಶೆಟ್ಟಿ,ಶ್ರೀ ಪ್ರವೀಣ್ ಮತ್ತು ನಿಶಾ ಶೆಟ್ಟಿ ಇವರ ಗೌರವಾರ್ಥವಾಗಿ ಕಟೀಲು ಶಾಲೆಗಳ ವಿದ್ಯಾರ್ಥಿಗಳಿಗೆ ಕೊಡಮಾಡುವ ೨೭ನೇ ವರ್ಷದ ಉಚಿತ ಬರೆಯುವ ಪುಸ್ತಕ ವಿತರಣಾ ಸಮಾರಂಭದಲ್ಲಿ ಸುಮಾರು ೯೦,೦೦೦ ರೂಪಾಯಿ ಮೌಲ್ಯದ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು.
ಈ ಸಂದರ್ಭ ಹರಿನಾರಾಯಣದಾಸ ಆಸ್ರಣ್ಣ, ಈಶ್ವರ ಕಟೀಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಕುಮಾರಿ ಕುಸುಮಾವತಿ ರಾಜಶೇಖರ್ ಎನ್, ಚಂದ್ರಶೇಖರ್ ಭಟ್ ಶ್ರೀಮತಿ ಸರೋಜಿನಿ, ಶಾಲಾಭಿವೃದ್ಧಿ ಸಮಿತಿಯ ಗ್ರೆಗರಿ ಸಿಕ್ವೇರಾ, ಸ್ಪೋರ್ಟ್ ಗೇಮ್ಸ್ ಕ್ಲಬ್‌ನ ಮೋಹನ, ಕೇಶವ ಕಟೀಲು, ಅಶೋಕ ಕೊಂಡೇಲ, ಐವನ್ ಡಿಸೋಜಾ ಉಪಸ್ಥಿತರಿದ್ದರು. 
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article