ಡಬ್ಲ್ಯೂ ಐಎಫ್ಎ (WIFA) ಅಂತರ್ ಜಿಲ್ಲಾ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಮೆಂಟ್ ಗೆ ಸಮರ್ಥ್ ಸಿ ರೈ ಮುಂಬಯಿ ಜಿಲ್ಲೆಯಿಂದ ಆಯ್ಕೆ
Thursday, May 30, 2024
ಡಬ್ಲ್ಯೂ ಐಎಫ್ಎ (WIFA) ಅಂತರ್ ಜಿಲ್ಲಾ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಮೆಂಟ್ ಗೆ ಸಮರ್ಥ್ ಸಿ ರೈ ಅವರು ಮುಂಬಯಿ ಜಿಲ್ಲೆಯಿಂದ ಆಯ್ಕೆಯಾಗಿದ್ದು ಮೇ. 22 ರಂದು ಆರಂಭಗೊಂಡು ಮೇ .29 ರ ವರೆಗೆ ಶಿರ್ಪುರ್, ಧುಲೆ, ಇಲ್ಲಿ ನಡೆದ ಡಬ್ಲ್ಯೂ ಐಎಫ್ಎ ಅಂತರ ಜಿಲ್ಲಾ ಸಬ್ ಜೂನಿಯರ್ ಬಾಲಕರ ಪಂದ್ಯಾವಳಿ (Inter-District Sub Junior Boys Tournament ) ಅಂಡರ್13 ಸ್ಪರ್ಧೆಯಲ್ಲಿ ಮುಂಬಯಿ ತಂಡವನ್ನು ಸಮರ್ಥ್ ಸಿ. ರೈ ಪ್ರತಿನಿಧಿಸುತ್ತಿದ್ದಾರೆ.
ಮಹಾರಾಷ್ಟ್ರ ದ 32 ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮುಂಬೈ ಒಂದಾಗಿದೆ
ಅಂತರ ಜಿಲ್ಲಾ ಸಬ್ ಜೂನಿಯರ್ಸ್ ಬಾಲಕರ ಟೂರ್ನಮೆಂಟ್ ನಲ್ಲಿ ಆಯ್ಕೆಯಾಗಿರುವ ಸಮರ್ಥ್ ರೈ ಜಿಲ್ಲಾ ಮಟ್ಟದ ಫುಟ್ಬಾಲ್ ಟೂರ್ನಮೆಂಟ್ ಆಟವಾಡಿ ಥಾಣೆ ಜಿಲ್ಲೆ ಯನ್ನು 3-0 ಅಂತರದಿಂದ ಸೋಲಿಸಿ ಜಯಭೇರಿ ಸಾಧಿಸಿದ್ದಾರೆ. ಇದರಲ್ಲಿ ಸಮರ್ಥ್ ರೈ ಯವರು ಕೊನೆಯ 20 ನಿಮಿಷ ದಲ್ಲಿ ಎಂಟ್ರಿ ಮಾಡಿ ಒಂದು ಗೋಲ್ ಮತ್ತು ಒಂದು ಅಸಿಸ್ಟ ನಿಂದ 3-0 ಗೋಲನಲ್ಲಿ ಮುಂಬಯಿ ಯನ್ನು ಗೆಲ್ಲಿಸಲು ಸಹಾಯವಾದರು.
ಸಮರ್ಥ್ ರೈ ಕನಕಿಯಾ ಇಂಟರ್‌ನ್ಯಾಶನಲ್ ಮೀರಾ ಭಾಯಂದರ್‌ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿ. ಸಿಎಫ್ಸಿಐ ಕ್ಲಬ್ಬಿನಲ್ಲಿ ಫುಟ್ಬಾಲ್ ನ ತರಬೇತಿ ಪಡೆಯುತ್ತಿದ್ದಾರೆ.
2011 ರ ಜೂ. 21 ರಂದು ಮಂಗಳೂರಿನ ಮುಚ್ಚೂರು ಗ್ರಾಮದಲ್ಲಿ ಜನಿಸಿದ ಸಮರ್ಥ್ ರೈ ಮುಂಬಯಿ ನಿವಾಸಿಯಾಗಿದ್ದು ,ಮಿಾಂಜ ಮಂಜಲ್ತೋಡಿ ಪೊಸನಿಕೆ ಮನೆ ಚಂದ್ರಶೇಖರ್ ರೈ ಮತ್ತು ಮುಚ್ಚೂರು ಕಲ್ಕುಡೆ ಕೈದುಮಾರು ಗುತ್ತು ಕುಶಲ ರೈ ಅವರ ಪುತ್ರ . ದಕ್ಷಿಣ ಕನ್ನಡ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಕಲ್ಕುಡೆ ಲೋಕೇಶ್ ಮುಚ್ಚೂರು ಇವರ ಅಳಿಯ.