-->


ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೆಎಸ್ ರಾವ್ ನಗರ -  ಶಾಲಾ  ಪ್ರಾರಂಭೋತ್ಸವ

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೆಎಸ್ ರಾವ್ ನಗರ - ಶಾಲಾ ಪ್ರಾರಂಭೋತ್ಸವ

ಮೂಲ್ಕಿ:ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೆಎಸ್ ರಾವ್ ನಗರ ಇಲ್ಲಿ ಶಾಲಾ  ಪ್ರಾರಂಭೋತ್ಸವವು ಅದ್ದೂರಿಯಾಗಿ  ನಡೆಯಿತು. 

 ಪ್ರಾರ್ಥನೆಯೊಂದಿಗೆ  ಮಕ್ಕಳಿಂದ ಶಾರದಾ ದೇವಿಗೆ ಪುಷ್ಪಾರ್ಚನೆ  ಗೈದು  ದೀಪ ಬೆಳಗಿಸುವುದ  ಉದ್ಘಾಟನೆಗೊಳಿಸಲಾಯಿತು.ಅಧ್ಯಕ್ಷತೆ ವಹಿಸಿ  ಮಾತನಾಡಿದ ಬಪ್ಪನಾಡು ಇನ್ಸ್ ಫಯರ್ ನ ಸ್ಥಾಪಕ ಅಧ್ಯಕ್ಷ ಲ. ವೆಂಕಟೇಶ ಹೆಬ್ಬಾರ್  ಅವರು ತಾಲೂಕು ಮಟ್ಟದ ಸರಕಾರಿ ಶಾಲೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯ ಶಿಕ್ಷಕ ವೃಂದದವರ   ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಂಗ್ಲ ಮಾಧ್ಯಮ ಶಾಲೆಗಳ ಸ್ಪರ್ಧಾತ್ಮಕ ಸಮಯದಲ್ಲೂ ರಾಜ್ಯದ ಕೆಲವೇ ಕೆಲವು ಶಾಲೆಗಳಲ್ಲಿ ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರದ ಅನುದಾನವನ್ನು ಪಡೆದು  ಇನ್ನು ಹೆಚ್ಚಿನ ಮಕ್ಕಳ ನ್ನು ಹೊಂದಿ ಜಿಲ್ಲಾಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಲಿ ಎಂದು  ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 
ಎಸ್ಡಿಎಂಸಿ ಅಧ್ಯಕ್ಷೆ  ಶ್ರೀಮತಿ ಜ್ಯೋತಿ, ಶಾಲಾ ಮುಖ್ಯೋಪಾಧ್ಯಾಯ  ದಿನೇಶ್ ಕೆ, ಹಿರಿಯ ಶಿಕ್ಷಕರಗಳಾದ ಶ್ರೀಮತಿ ಸುಜಾತ, ಶ್ರೀಮತಿ ಪದ್ಮಾವತಿ ಹಾಗೂ ಶ್ರೀದೇವಿ ಹಾಗೂ ಶಿಕ್ಷಕ ವೃಂದದವರು  ಉಪಸ್ಥಿತರಿದ್ದರು .

ಕಾರ್ಯಕ್ರಮದಲ್ಲಿ  ಸರಕಾರದಿಂದ ಕೊಡಲ್ಪಡುವ ಪಠ್ಯಪುಸ್ತಕ ಸಮವಸ್ತ್ರ ಗಳನ್ನು  ವಿತರಿಸಲಾಯಿತು. ಶಿಕ್ಷಕಿ  ಶ್ರೀದೇವಿ  ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಜಾತ ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article