-->

ವೀರ ಶಿವಾಜಿ ಕುಣಿತಾ ಭಜನಾ ಮಂಡಳಿ ಕಲ್ಲಾಡಿ-ಕುಪ್ಪೆಪದವುಇದರ ನಾಲ್ಕನೇ ವರುಷದ ಸಂಭ್ರಮಾಚರಣೆ

ವೀರ ಶಿವಾಜಿ ಕುಣಿತಾ ಭಜನಾ ಮಂಡಳಿ ಕಲ್ಲಾಡಿ-ಕುಪ್ಪೆಪದವುಇದರ ನಾಲ್ಕನೇ ವರುಷದ ಸಂಭ್ರಮಾಚರಣೆ

ಕೈಕಂಬ : ವೀರ ಶಿವಾಜಿ ಕುಣಿತಾ ಭಜನಾ ಮಂಡಳಿ ಕಲ್ಲಾಡಿ-ಕುಪ್ಪೆಪದವುಇದರ ನಾಲ್ಕನೇ ವರುಷದ ಸಂಭ್ರಮಾಚರಣೆ, ಪುಸ್ತಕ ವಿತರಣೆ ಮತ್ತು ಸಮಾಜ ಸೇವಕರಿಗೆ ಗೌರವ ಸಲ್ಲಿಕೆ ಕಾರ್ಯಕ್ರಮ  ಕಟ್ಟೆಮಾರ್ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ  ನಡೆಯಿತು. 
 
ಕಾರ್ಯಕ್ರಮದಲ್ಲಿ ಸಮಾಜಕ್ಕೆ ಸಲ್ಲಿಸಿದ ಕೊಡುಗೆಗಾಗಿ  ಅರ್ಜುನ್ ಭಂಡಾರ್ಕರ್ ಮತ್ತು ಶ್ರೀರಾಮ ಸೇನೆಯ ವಾಯುಪುತ್ರ ಘಟಕ ಕುಪ್ಪೆಪದವು ಇದರ ಗೌರವಧ್ಯಕ್ಷ ಚಂದ್ರಹಾಸ್ ಕೋಟ್ಯಾನ್ ಅವರುಗಳಿಗೆ ಪೇಟ ತೊಡಿಸಿ, ಶಾಲು ಹೊದೆಸಿ, ಫಲಪುಷ್ಪ, ಸನ್ಮಾನ ಪತ್ರ ನೀಡಿ ವೇದಿಕೆಯಲ್ಲಿ ಗೌರವಿಸಲಾಯಿತು.
10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶ್ರೇಯಸ್ ಕಲ್ಲಾಡಿ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕುಮಾರಿ ಮೋಕ್ಷ ಕಲ್ಲಾಡಿ ಮತ್ತು ಭಜನಾ ಮಂಡಳಿಗೆ ಸರ್ವ ರೀತಿಯ ಸಹಕಾರ ನೀಡುತ್ತಿವ ವಿವಿಧ ಸಂಘ-ಸಂಸ್ಥೆಗಳು ಮತ್ತು ದಾನಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸರಕಾರಿ ಪ್ರೌಢ ಶಾಲೆ ಕಲ್ಲಾಡಿ ಮತ್ತು ಪ್ರಾಥಮಿಕ ಶಾಲೆ ಕಲ್ಲಾಡಿ ಇದರ ಸುಮಾರು 150 ವಿದ್ಯಾರ್ಥಿಗಳಿಗೆ ಹಾಗೂ ಭಜನಾ ಮಂಡಳಿಯ ಸದಸ್ಯ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಇದೇ ವೇಳೆ ಅತಿಥಿಗಳು ವಿತರಿಸಿದರು.

 ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್(ರಿ)ಸಂಸ್ಥಾಪಕ ಅರ್ಜುನ್ ಭಂಡಾರ್ಕರ್  ಮತ್ತು ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ  ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದರು.
ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ಅಧ್ಯಕ್ಷ ವಸಂತ ಪೂಜಾರಿ,ಕುಪ್ಪೆಪದವು ಗ್ರಾಮ ಪಂಚಾಯತ್ ಸದಸ್ಯ ನಿತೇಶ್ ಕುಮಾರ್ ದೊಡ್ಡಳಿಕೆ, ವಿಶ್ವಹಿಂದೂ ಪರಿಷತ್ ಗುರುಪುರ ಪ್ರಖಂಡದ ಸಹ ಕಾರ್ಯದರ್ಶಿ ದಿನೇಶ್ ಸುವರ್ಣ, ಕುಣಿತ ಭಜನಾ ಮಂಡಳಿಯ ಅಧ್ಯಕ್ಷ ನಿತಿನ್ ಎಡಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಸದಸ್ಯರು ಪ್ರಾರ್ಥನೆ ನೆರವೇರಿಸಿದರು. ಗುರುಪ್ರಸಾದ್ ಸ್ವಾಗತಿಸಿದರು.
ಬಾಲಕೃಷ್ಣ ವರದಿ ವಾಚಿಸಿದರು. ಸಂದೀಪ್ ಕಲ್ಲಾಡಿ  ಮತ್ತು ಮೋಹನ್ ಕಲ್ಲಾಡಿ  ಸಮ್ಮಾನ ಪತ್ರ ವಾಚಿಸಿದರು. ಮನೋಜ್ ವಾಮಂಜೂರು ನಿರೂಪಿಸಿ, ಬಾಲಕೃಷ್ಣ ಕಲ್ಲಾಡಿ  ವಂದಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807