-->

ಮೇ.11-  ಶ್ರೀ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯಲ್ಲಿ  ಕಣ್ಣಿನ ಶಸ್ತ್ರ ಚಿಕಿತ್ಸ ಘಟಕ ದ ಉದ್ಘಾಟನೆ

ಮೇ.11- ಶ್ರೀ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸ ಘಟಕ ದ ಉದ್ಘಾಟನೆ

ಕಟೀಲು : ಶ್ರೀ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲು ನಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸ ಘಟಕ ದ ಉದ್ಘಾಟನೆ  ತಾ. 11 ರಂದು ಬೆಳಿಗ್ಗೆ 10ಗಂಟೆಗೆ  ನಡೆಯಲಿದೆ.
 ಎಮ್. ಆರ್.ಪಿ.ಎಲ್ ಸಂಸ್ಥೆ ಯ ಜಿ. ಜಿ. ಎಮ್. ಎಚ್ ಆರ್. ಕೃಷ್ಣ ಹೆಗ್ಡೆ ಉದ್ಘಾಟನೆ ನಡೆಸಲಿದ್ದಾರೆ 
.ಮಾಹೆ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್.ವಹಿಸಲಿದ್ದಾರೆ. ಕಟೀಲು ದೇವಳದ  ಅರ್ಚಕ ಶ್ರೀಹರಿನಾರಾಯಣ ದಾಸ, ಅಸ್ರಣ್ಣ, ಕಟೀಲು ದೇವಳದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರು ಡಾ ಸುರೇಶ್ ರಾವ್, ಡಾ ಅಜಯ್ ಕಾಮತ್ ಕಣ್ಣಿನ ವಿಭಾಗ ಮುಖ್ಯಸ್ಥರು ಕೆಎಂಸಿ ಆಸ್ಪತ್ರೆ ಮಂಗಳೂರು. ಡಾ ಆನಂದ್ ವೇಣುಗೋಪಾಲ್ ಚೀಫ್ ಆಪರೇಟಿಂಗ್ ಆಫೀಸರ್ ಟೀಚಿಂಗ್ ಹಾಸ್ಪಿಟಲ್ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್. ಡಾ ಬಿ ಉಣ್ಣಿಕೃಷ್ಣನ್. ಭಾಗವಹಿಸಲಿದ್ದಾರೆ ಎಂದು ಕಟೀಲು ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಶಿವಾನಂದ ಪ್ರಭು  ತಿಳಿಸಿದ್ದಾರೆ 
ಗ್ರಾಮೀಣ ಭಾಗದಲ್ಲಿ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸ ಘಟಕ ಸುಮಾರು 20 ಲಕ್ಷ ರೂಪಾಯಿ ಮೊತ್ತದಲ್ಲಿ ನಿರ್ಮಿಸಿದ್ದು ಎಮ್ ಆರ್ ಪಿ ಎಲ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಂಪನ್ನ ಗೊಂಡು ಪರಿಸರದ ಜನರಿಗೆ ಪಟ್ಟಣಕ್ಕೆ ಹೋಗಿ ಚಿಕಿತ್ಸೆ ಪಡೆಯುವ ಅನಿವಾರ್ಯ ಪರಿಸ್ಥಿತಿಗೆ ಸಹಕಾರಿ ಆಗಲಿದೆ.ಎಂದು ಡಾ ಪ್ರಭು ವಿವರಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807