-->


ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಸ್ಥಾಪನಾ ದಿನಾಚರಣೆ

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಸ್ಥಾಪನಾ ದಿನಾಚರಣೆ

ಹಳೆಯಂಗಡಿ : ಪ್ರತಿಷ್ಠಿತ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಸ್ಥಾಪನಾ ದಿನಾಚರಣೆಯು  ಸಂಘದ ಸಭಾಭವನದಲ್ಲಿ  ಸೋಮವಾರದಂದು ನಡೆಯಿತು 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ
 ಅಧ್ಯಕ್ಷ  ಎಚ್ ವಸಂತ್ ಬೆರ್ನಾಡ್ ವಹಿಸಿ ಮಾತನಾಡಿ  ಗ್ರಾಹಕರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸಂಘ ಶ್ರೇಯೋಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಹೆಬ್ರಾನ್ ಅಸೆಂಬ್ಲಿ ಪೆಂಟ ಕೋಸ್ತಲ್ ಚರ್ಚ್ ನ ಪಾಸ್ಟರ್ ಐ ಡಿ ಪ್ರಸನ್ನ ಮಾತನಾಡಿ ಸೇವಾ ಸಂಸ್ಥೆಗಳು ಪ್ರಾಮಾಣಿಕತೆ ಹಾಗೂ ಕಾರ್ಯದಕ್ಷತೆ ಮೂಲಕ ಗ್ರಾಹಕರ ಭರವಸೆಗಳನ್ನು ಈಡೇರಿಸಿದರೆ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯವಾಗಿದ್ದು ಸೊಸೈಟಿಯ ಅಭಿವೃದ್ಧಿಯು ಮೂಲ ಮಂತ್ರವಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಮುಲ್ಕಿ ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್, ಸಂಘದ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಉಮಾನಾಥ ಜಿ ಶೆಟ್ಟಿಗಾರ್, ಗಣೇಶ ಅಮೀನ್ ಸಂಕಮಾರ್, ಗೌತಮ್ ಜೈನ್ ವಿಜಯಕುಮಾರ್ ಸನಿಲ್ ಮಿರ್ಜಾ ಅಹಮದ್ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು. ಶಾಖಾ ಪ್ರಬಂಧಕರಾದ ಅಕ್ಷತಾ ಕಾರ್ಯಕ್ರಮ  ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article