ಕೊಂಚಾರು ನಿವಾಸಿ ಚೈಬಾವು ಕಾಣೆ: ಪ್ರಕರಣ ದಾಖಲು
Monday, May 20, 2024
ಬಜಪೆ: ಕೊಂಚಾರು ಬದ್ರಿಯಾ ಜುಮಾ ಮಸೀದಿ ಬಳಿಯ ನಿವಾಸಿ ಚೈಬಾವು(51) ಎಂಬವರು ಗುರುವಾರದಿಂದ ಕಾಣೆಯಾಗಿರುವ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಚೈಬಾವು ಅವರು ಗುರುವಾರ ಬೆಳಗ್ಗೆ ತನ್ನ ಕೊಂಚಾರು ಮನೆಯಿಂದ ಹೋದವರು ಹಿಂದಿರುಗಿ ಬಾರದೆ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಮುಸ್ತರಿಬಾನು ಅವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚೈಬಾವು ಅವರು ಕಾಣೆಯಾದ ದಿನ ಗುಲಾಬಿ ಬಣ್ಣದ ಟೀ ಶರ್ಟ್, ಹಸಿರು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದು, ಕೋಲು ಮುಖ, ಸಣಕಲು ಶರೀರ, 5.5 ಎತ್ತರ, ಗೋದಿ ಮೈಬಣ್ಣ ಹೊಂದಿದ್ದಾರೆ. ಕನ್ನಡ, ಹಿಂದಿ, ತುಳು ಮತ್ತು ಬ್ಯಾರಿ ಭಾಷೆಯನ್ನು ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ತಿಳಿದಲ್ಲಿ ಬಜ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಬಜ್ಪೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.