ಶಿಬರೂರು ಕ್ಷೇತ್ರದಲ್ಲಿ ದೈವಗಳಿಗೆ ಬ್ರಹ್ಮಕುಂಭಾಭಿಷೇಕ
Saturday, April 27, 2024
ಕಟೀಲು : ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಶ್ರೀ ಉಳ್ಳಾಯ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ಶ್ರೀ ಶ್ರೀ ಅಷ್ಟೋತ್ತರಕ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದರು ಶ್ರೀ ಫಲಿಮಾರು ಮಠ ಇವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಕಟೀಲು ಆಸ್ರಣ್ಣ ಬಂಧುಗಳ ಉಪಸ್ಥಿತಿಯಲ್ಲಿ ಬ್ರಹ್ಮ ಶ್ರೀ ಶಿಬರೂರು ವೇದವ್ಯಾಸ ತಂತ್ರಿ ಕೃಷ್ಷರಾಜ ತಂತ್ರಿಗಳ ಅಮೃತ ಹಸ್ತದಿಂದ ಬ್ರಹ್ಮಕುಂಭಾಭಿಷೇಕವು ನಡೆಯಿತು. ಈ ಸಂದರ್ಭದಲ್ಲಿ ತಿಬಾರ್ ಗುತ್ತಿನಾರ್ ಶಿಬರೂರು ಉಮೇಶ್ ಎನ್ ಶೆಟ್ಟಿ, ಜೀಣೋದ್ದಾರ ಮತ್ತು ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಕೋಂಜಾಲಗುತ್ತು ಪ್ರಭಾಕರ ಎಸ್ ಶೆಟ್ಡಿ ಮತ್ತು ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.