-->

ಬಾರ್ದಿಲ ಸಾಂಬಸದಾಶಿವ ದೇವಸ್ಥಾನ,ಬ್ರಹ್ಮಕಲಶ

ಬಾರ್ದಿಲ ಸಾಂಬಸದಾಶಿವ ದೇವಸ್ಥಾನ,ಬ್ರಹ್ಮಕಲಶ

ಸಾವಿರಾರು ವರ್ಷಗಳ ಪುರಾಣ ಇತಿಹಾಸ ಹೊಂದಿರುವ  ಮಂಗಳೂರು ತಾಲೂಕಿನ ಕಿಲೆಂಜೂರು ಗ್ರಾಮದ ಕುಪ್ಪೆಪದವು  ಬಾರ್ದಿಲ ಸಾಂಬಸದಾಶಿವ ದೇವಸ್ಥಾನವು  ಸುಮಾರು 
850 ಹಿಂದೆ ಅಂದಿನ  ರಾಜಕೀಯ ಮತ್ತು ಸಾಮಾಜಿಕ ಸ್ಟಿತ್ಯಂತರದ ಪರಿಣಾಮವಾಗಿ ಶ್ರೀದೇವರಿಗೆ ನಿತ್ಯ  ಪೂಜಾ ವಿಧಿಗಳು ನಿಂತುಹೋದಾಗ  ಶ್ರೀ ಕ್ಷೇತ್ರದ ಪವಿತ್ರ ಶಿವಲಿಂಗವನ್ನು ಚೌಟ ಅರಸರ ಆಡಳಿತದಲ್ಲಿ ನಿರ್ಮಾಣಗೊಂಡ ಮತ್ತಿಗೆ ಶ್ರೀ ಸೋಮನಾಥೇಶ್ವರ ಕ್ಷೇತ್ರಕ್ಕೆಕೊಂಡು ಹೋಗಲಾಯಿತು ಎಂದು ಕ್ಷೇತ್ರದ ಇತಿಹಾಸದಲ್ಲಿ ಕಂಡುಬಂದಿತ್ತು. 
ಸುಮಾರು 45 ವರ್ಷಗಳ ಹಿಂದೆ  ಜ್ಯೋತಿಷ್ಯದ ಮೂಲಕ ಚಿಂತನೆ ನಡೆಸಲಾಗಿ ದೇವರಗುಡ್ಡೆ ಎಂದೇ ಹೆಸರಿರುವ ಈ ಪ್ರದೇಶದಲ್ಲಿ ಶಿವ ದೇವಾಲಯವಿದ್ದು ಕುರುಹುಗಳು ಲಭಿಸಿದ್ದವು.ಬಳಿಕ  ಕ್ಷೇತ್ರವನ್ನು ಪುನರ್ ನಿರ್ಮಾಣಗೊಳಿಸಿ ಊರ್ಜಿತಗೊಳಿಸಬೇಕೆಂದು ಸಂಕಲ್ಪ ಮಾಡಿ ಯಂ. ಕಾಂತಪ್ಪ ಶೆಟ್ಟಿಯವರ ಮುಂದಾಳತ್ವದಲ್ಲಿ ಹಾಗೂ ಮಿಜಾರು ಗುತ್ತು ಶ್ರೀ ಆನಂದ ಆಳ್ವ  ಇವರ ಘನ ಅಧ್ಯಕ್ಷತೆಯಲ್ಲಿ ಶ್ರೀ ಐ.ರಾಮ ಅಸ್ರಣ್ಣ ಅವರ ಅಶೀರ್ವಚನದೊಂದಿಗೆ ಜೀರ್ಣೋದ್ಧಾರ ಸಮಿತಿ ರಚಿನೆಯಾಗಿ, ಗರ್ಭಗುಡಿಯೊಂದಿಗೆ ದೇವಸ್ಥಾನವು ನಿರ್ಮಿಸಲ್ಪಟ್ಟು,1992 ರ ಮಾರ್ಚ್ 18 ರಂದು  ತಂತ್ರಿಗಳಾದ  ದೇರೆಬೈಲು ಶ್ರೀ ಹರಿಕೃಷ್ಣ ತಂತ್ರಿ ಯವರ ನೇತೃತ್ವದಲ್ಲಿ ಅಂಗ ಪ್ರತಿಜ್ಞೆ ಬ್ರಹ್ಮಕಲಶಾಧಿ ಪುಣ್ಯ, ಕಾರ್ಯಗಳು ಕೊಡುಗೈ ದಾನಿಗಳ ಸಹಕಾರದಿಂದ ನಡೆದಿತ್ತು.

ಶ್ರೀ ಕ್ಷೇತ್ರದ ಸಾನಿಧ್ಯ ವೃದ್ಧಿಗಾಗಿ ಶ್ರೀ ಯಂ. ಸೋಮಶೇಖರ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿರುವ ವ್ಯವಸ್ಥಾಪನಾ ಸಮಿತಿ ಹಾಗೂ ಊರ ಪರವೂರ ಭಕ್ತರೆಲ್ಲರೂ ಸೇರಿ ಒಮ್ಮತದಿಂದ ಪರಿಪೂರ್ಣ ದೇವಸ್ಥಾನ ನಿರ್ಮಿಸಲು ಕೈಗೊಂಡ ಸತ್ ಸಂಕಲ್ಪದಂತೆ ಕ್ಷೇತ್ರ ನಿರ್ಮಾಣದ ಸ್ಥಪತಿಗಳಾದ ವಿದ್ವಾನ್ ಶ್ರೀ ಕೃಷ್ಣರಾಜ ತಂತ್ರಿ ಕುಡುಪು ಇವರ ವಾಸ್ತು ವಿನ್ಯಾಸದಂತೆ,
ಪ್ರವೀಣ್ ಆಳ್ವ ಗುಂಡ್ಯ ಅಧ್ಯಕ್ಷತೆ, ಶ್ರೀನಿವಾಸ್ ಶೆಟ್ಟಿ ಕಟ್ಟಪುಣಿ ಪ್ರಧಾನ ಕಾರ್ಯದರ್ಶಿಯಾಗಿರುವ, ವಿವಿಧ ಕ್ಷೇತ್ರಗಳಲ್ಲಿ ಗಣ್ಯರನ್ನು ಒಳಗೊಂಡ ಜೀರ್ಣೋದ್ದಾರ ಸಮಿತಿಯ ನೇತೃತ್ವದಲ್ಲಿ, ಊರ-ಪರವೂರ ದಾನಿಗಳ ಸಹಕಾರದಲ್ಲಿ ಅಂದಾಜು 2.5 ಕೋಟಿ ವೆಚ್ಚದಲ್ಲಿ ಸುಂದರವಾದ, ಸಂಪೂರ್ಣ ಶಿಲಾಮಯ ಗರ್ಭಗುಡಿ, ಸುತ್ತು ಪೌಳಿ, ಗಣಪತಿ ಗುಡಿ, ನಾಗ ರಕ್ತೇಶ್ವರಿ ಗುಡಿ, ಕೊಡಮಣಿತ್ತಾಯ ಗುಡಿ  ಮತ್ತು ಅಗ್ರ ಸಭಾ ಗೋಪುರ ಸಹಿತ ಜೀರ್ಣೋದ್ದಾರ ಕೆಲಸಗಳು ನಡೆದಿದೆ. ಮುಕ್ತಾಯವಾಗಿದ್ದು,

ಅಜಿತ್ ಕುಮಾರ್ ಜೈನ್ ಕುಪ್ಪೆಪದವು ಅಧ್ಯಕ್ಷತೆಯ, ಪ್ರಧಾನ ಕಾರ್ಯದರ್ಶಿಯಾಗಿ  ಜಗದೀಶ್ ಪಾಕಜೆ, ವಿನೋದ್ ಕುಮಾರ್ ಅಂಬೆಲೊಟ್ಟು ಕಾರ್ಯಾಧ್ಯಕ್ಷರಾಗಿರುವ  ಮತ್ತು ಧಾರ್ಮಿಕ ಮುಂದಾಳುಗಳನ್ನು ಒಳಗೊಂಡ ಬ್ರಹ್ಮ ಕಲಶೋತ್ಸವ ಸಮಿತಿಯ ನೇತೃತ್ವದಲ್ಲಿ, ವಿವಿಧ  ಉಪಸಮಿತಿಗಳ  ಉಸ್ತುವಾರಿಯಲ್ಲಿ,, ಭಕ್ತರ ಶ್ರಮದಾನದ ಸೇವೆಯೊಂದಿಗೆ  ಏಪ್ರಿಲ್ 25 ರಿಂದ 28 ರ ತನಕ  ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಸಂಭ್ರಮವು  ನಡೆಯುತ್ತಿದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807