-->

ಎ.25-28ಬಾರ್ದಿಲ ಕ್ಷೇತ್ರದಲ್ಲಿ ಬ್ರಹ್ಮಕಲಶದ ಸಂಭ್ರಮ

ಎ.25-28ಬಾರ್ದಿಲ ಕ್ಷೇತ್ರದಲ್ಲಿ ಬ್ರಹ್ಮಕಲಶದ ಸಂಭ್ರಮ

ಬಜಪೆ : ಮಂಗಳೂರು ತಾಲೂಕಿನ ಕಿಲೆಂಜಾರು ಕುಪ್ಪೆಪದವು ಬಾರ್ದಿಲ ದೇವರಗುಡ್ಡೆಯಲ್ಲಿ  ಸಂಪೂರ್ಣವಾಗಿ  ಜೀರ್ಣೋದ್ದಾರಗೊಂಡಿರುವ ಶ್ರೀ ಸಾಂಬಸದಾಶಿವ ದೇವಸ್ಥಾನದಲ್ಲಿ  ಸಾಂಬಸದಾಶಿವ ದೇವರ ಹಾಗೂ ಶ್ರೀ ಮಹಾಗಣಪತಿ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ರಾಜನ್ ದೈವ ಶ್ರೀ ಕೊಡಮಣಿತ್ತಾಯ ದೈವ ಪ್ರತಿಷ್ಠೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮ ವಿಭೂಷಣ ರಾಜರ್ಷಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಬ್ರಹ್ಮಶ್ರೀ ಡಾ| ದೇರೆಬೈಲು ಶಿವಪ್ರಸಾದ್ ತಂತ್ರಿಗಳ  ನೇತೃತ್ವದಲ್ಲಿ ಶ್ರೀ ದೇವಳದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಕಾರಂತರ ಸಹಯೋಗದೊಂದಿಗೆ 25ರ ಗುರುವಾರದಿಂದ 28ರ ಭಾನುವಾರದವರೆಗೆ ನಡೆಯಲಿದೆ.

ಎ.26 ರ   ಬೆಳಿಗ್ಗೆ 10:40ಕ್ಕೆ ಮಿಥುನ ಲಗ್ನದಲ್ಲಿ ಸಾಂಬಸದಾಶಿವ ದೇವರ ಲಿಂಗ ಪ್ರತಿಷ್ಠೆ, ಗಣಪತಿ ಬಿಂಬ ಪ್ರತಿಷ್ಠೆ,, ಅಷ್ಟಬಂಧ ಪ್ರತಿಷ್ಠೆ, ಕೊಡಮಣಿತ್ತಾಯ ದೈವದ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ.
ಬೆಳಿಗ್ಗೆ 11ರಿಂದ  ಭಜನಾ ಸಂಕೀರ್ತನೆ,12ರಿಂದ ಶ್ರೀ ದುರ್ಗೆಶ್ವರೀ ಕಲಾ ಆರ್ಟ್ಸ್ ಕುಪ್ಪೆಪದವು ಹಾಗೂ ಶ್ರೀ ವೀರ ಶಿವಾಜಿ ಕುಣಿತ ಭಜನಾ ಮಂಡಳಿ ಕಲ್ಲಾಡಿ ಇವರ ವತಿಯಿಂದ ದುರ್ಗೆಶ್ವರೀ ಮೆಲೋಡಿಸ್ ರಿಂದ ಸಂಗೀತ ರಸ ಮಂಜರಿ, ಬಳಿಕ ಸ್ವರಾನು ಪಲ್ಲವಿ ತಂಡದ ಮಂಗಳಾ ವಿಕ್ರಮ್ ಭಟ್ ಕುಪ್ಪೆಪದವು ಮತ್ತು ಬಾಲಕೃಷ್ಣ ಶೆಟ್ಟಿ ಎಡಪದವು ಇವರಿಂದ ರಾಗ ನಿನಾದ, ಸಂಜೆ 5:30ರಿಂದ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಭಕ್ತ ಮಾರ್ಕoಡೇಯ-ಭಸ್ಮಾಸುರ ಮೋಹಿನಿ-ಮೀನಾಕ್ಷಿ ಕಲ್ಯಾಣ-ಯಕ್ಷಗಾನ ಬಯಲಾಟ.
27ರ ಶನಿವಾರ ಬೆಳಿಗ್ಗೆ ನಾಗದೇವರ ಸನ್ನಿಧಿಯಲ್ಲಿ 25 ಕಲಶಾಭಿಷೇಕ, ರಕ್ತೇಶ್ವರಿ ಸನ್ನಿಧಿಯಲ್ಲಿ ನವಕಲಶಾಭಿಷೇಕ.
ಬೆಳಿಗ್ಗೆ 11ರಿಂದ ಭಜನಾ ಸಂಕೀರ್ತನೆ,
12ರಿಂದ ಅಂಗನವಾಡಿ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ, ಅಪರಾಹ್ನ 2ರಿಂದ ಕುಪ್ಪೆಪದವು ಶ್ರೀ ದುರ್ಗೆಶ್ವರೀ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ತಾಳಮದ್ದಳೆ ಜಾoಬವತಿ ಕಲ್ಯಾಣ, ಸಂಜೆ 5ರಿಂದಮೂಡಬಿದ್ರಿ ಚೌಟರ ಅರಮನೆಯ ಕುಲದೀಪ್ ಚೌಟರ ಅಧ್ಯಕ್ಷತೆಯಲ್ಲಿ, ಸೋಲೂರು ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಶ್ರೀ ವಿಖ್ಯಾತಾನಂದಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ  ಪಂಚವಿoಶತಿ ದೃವ್ಯ ಮಿಲಿತ 501 ಕಲಶಾಧಿವಾಸ, ಪಂಚಕುಂಡದಲ್ಲಿ ಅಭಿವಾನ ಹೋಮಗಳು, ಗಣಪತಿ ಸನ್ನಿಧಿಯಲ್ಲಿ 49 ಕಲಶಾಧಿವಾಸ.
ರಾತ್ರಿ 8ರಿಂದ ಕುಪ್ಪೆಪದವಿನ ಸ್ಥಳೀಯ ಮಹಿಳಾ ಬಳಗದವರಿಂದ ಶಿವತಾಂಡವ ನೃತ್ಯ.8:30ರಿಂದ ಕಲ್ಲಾಡಿ ನವ್ಯ ಮತ್ತು ಬಳಗದವರಿಂದ ನೃತ್ಯ,9ರಿಂದ ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿ ಇವರಿಂದ ಶ್ರೀಮತಿ ಡಾ. ಮಂಜರಿ ಪುಷ್ಪರಾಜ್ ಹಾಗೂ ಶಿಷ್ಯರಿಂದ ನೃತ್ಯ ವೈಭವ, ರಾತ್ರಿ 10ರಿಂದ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಇವರಿಂದ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ತುಳು ಪೌರಾಣಿಕ ನಾಟಕ.
28ರ ಆದಿತ್ಯವಾರ ಪೂರ್ವಾಹ್ನ 7:30ರಿಂದ ಬ್ರಹ್ಮ ಕಲಶಾಭಿಷೇಕ ಪ್ರಾರಂಭ.10:20ರ ಮಿಥುನ ಲಗ್ನದಲ್ಲಿ ಶ್ರೀ ಸಾಂಬಸದಾಶಿವ ದೇವರಿಗೆ, ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮ ಕಲಶಾಭಿಷೇಕ, ಮಧ್ಯಾಹ್ನ 12ರಿಂದ ಉತ್ಸಾಹಿ ತರುಣರು ಕುಲವೂರು ಕುಪ್ಪೆಪದವು ಇವರಿಂದ ತೆಲಿಕೆ ನಲಿಕೆ, ಮಧ್ಯಾಹ್ನ 1ರಿಂದ ಸತೀಶ್ ಶೆಟ್ಟಿ ಪಟ್ಲ, ರವಿಚಂದ್ರ ಕನ್ನಡಿಕಟ್ಟೆ ಮತ್ತು ಶ್ರೀಮತಿ ಅಮೃತಾ ಅಡಿಗ ಇವರ ಭಾಗವತಿಕೆಯಲ್ಲಿ ಯಕ್ಷಗಾನ ನಾಟ್ಯ ವೈಭವ,  ಸಂಜೆ 5ರಿಂದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ|ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ರಾತ್ರಿ 9ರಿಂದ ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ.
ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807