-->


ಕಾಂಗ್ರೆಸ್‌ ಸೇರ್ಪಡೆಗೊಂಡ 25ಕ್ಕೂ ಹೆಚ್ಚಿನ ಜೆಡಿಎಸ್‌ ಕಾರ್ಯಕರ್ತರು

ಕಾಂಗ್ರೆಸ್‌ ಸೇರ್ಪಡೆಗೊಂಡ 25ಕ್ಕೂ ಹೆಚ್ಚಿನ ಜೆಡಿಎಸ್‌ ಕಾರ್ಯಕರ್ತರು



ಕಿನ್ನಿಗೋಳಿ: ಮೂಲ್ಕಿ - ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಸುಮಾರು 25ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕೆಪಿಸಿಸಿ ಕೋ ಆಡಿನೇಟರ್‌ ವಸಂತ್‌ ಬರ್ನಾರ್ಡ್‌ ಹಾಗೂ ರಾಜ್ಯ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಕೆ. ಸಾಹುಲ್ ಹಮೀದ್ ಕದಿಕೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಜೆಡಿಎಸ್‌ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಉಪಾಧ್ಯಕ್ಷ ಹಾಗೂ ಮುಲ್ಕಿ ಬ್ಲಾಕ್ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ನಿಸಾರ್ ಅಹ್ಮದ್ ಅಂಗರಗುಡ್ಡೆ, ಹುಸೈನ್, ರಹೀಮ್ ಸಯ್ಯದ್, ನಿಲಾಧರ ದೇವಾಡಿಗ, ಆಸೀಫ್‌, ಇಸ್ಮಾಯಿಲ್ ಬಿ.ಎಂ., ಮುಸ್ತಫಾ ಸಯ್ಯದ್, ನಶಾಲ್ ಅಹ್ಮದ್, ಖಾದರ್ ಶಿಮಾನ್, ಮುಬಾರಕ್ ಪುನರೂರು ಸೇರಿದಂತೆ 25ಕ್ಕೂ ಹೆಚ್ಚಿನ ಜೆಡಿಎಸ್ ಕಾರ್ಯಕರ್ತರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರರು ಕಿನ್ನಿಗೋಳಿಯ ಅವರ ನಿವಾಸದ ಕಚೇರಿಯಲ್ಲಿ ಕಾಂಗ್ರೆಸ್‌ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು.
 
ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ, ಜೆಡಿಎಸ್‌ ಮುಖಂಡರು ಹಾಗೂ ಅಂಗರಗುಡ್ಡೆ ಜುಮಾ ಮಸೀದಿಯ ಅಧ್ಯಕ್ಷರಾದ ನಿಸಾರ್‌ ಅಹ್ಮದ್‌ ಅವರ ನೇತೃತ್ವದಲ್ಲಿ ಹಲವರು ಇಂದು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಎಲ್ಲರನ್ನೂ ತುಂಬು ಮನಸ್ಸಿನಿಂದ ಸ್ವಾಗತಿಸುತ್ತಿದ್ದೇವೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಜೆಡಿಎಸ್‌- ಬಿಜೆಪಿಯೊಂದಿಗೆ ಕೈಜೋಡಿಸಿದಾಗಲೇ ಅವರ ಯೋಗ್ಯತೆ ತಿಳಿದು ಅದರ ನಾಯಕರು ಕಾರ್ಯಕರ್ತರು ಕಾಂಗ್ರೆಸ್‌ ಗೆ ಸೇರ್ಪಡೆಗೊಳ್ಳುತ್ತಿದ್ದಾಋಎ. ಇದು ಉತ್ತಮ ಬೆಳವಣಿಗೆ ಎಂದ ಅವರು, ಈ ಮೂಲಕ ಇನ್ನೂ ಹೆಚ್ಚಿನ ಜೆಡಿಎಸ್‌ ಮುಕಂಡರು ಕಾರ್ಯಕರ್ತರನ್ನು ಕಾಂಗ್ರೆಸ್‌ ಗೆ ಸೇರ್ಪಡೆಗೊಳಿಸುವಂತೆ ಸಲಹೆ ನೀಡಿದರು.

ಬಳಿಕ ಮಾತನಾಡಿದ ನಿಸಾರ್‌ ಅಹ್ಮದ್‌, ಜಾತ್ಯತೀತ ಜನತಾ ದಳ ಈಗ ಕೋಮುವಾದಿಗಳೊಂದಿಗೆ ಸೇರಿಕೊಂಡಿದೆ. ನಾವು ಕೋಮವಾದಿಗಳನ್ನೊಂದಿಗೆ ಸೇರಿಕೊಳ್ಳಲು ನಮ್ಮ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಏ.24ರಂದು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ರಾಜ್ಯ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಕೆ. ಸಾಹುಲ್ ಹಮೀದ್ ಕದಿಕೆ, ಕೆಪಿಸಿಸಿ ಕೋ ಆಡಿನೇಟರ್‌ ವಸಂತ್‌ ಬರ್ನಾರ್ಡ್‌ ಅವರ ಮಾರ್ಗದರ್ಶನಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ ಅವರ ನೇತೃತ್ವದಲ್ಲಿ ಇಂದು ಜಾತ್ಯತೀತ ಸಿದ್ದಾಂತದ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ. ಮುಂದಿನ ಲೋಕಸಭೆ, ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಪಕ್ಷ ಬಲವರ್ಧನೆಯ ಜೊತೆಗೆ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಅವಿರತ ಶ್ರಮಿಸುವುದಾಗಿ ನುಡಿದರು.

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರರ್ಶಿ ಅಬ್ದುಲ್‌ ಖಾದರ್‌ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article