ಕಟೀಲು ಜಾತ್ರಾ ಮಹೋತ್ಸವ - ರಸ್ತೆ ಸಂಚಾರದಲ್ಲಿ ಬದಲಾವಣೆ
Thursday, April 18, 2024
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಏ.19ಶುಕ್ರವಾರ ದಿಂದ 20ಶನಿವಾರದ ವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರ ದೃಷ್ಟಿಯಿಂದ ಕಟೀಲು ಪರಿಸರದಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಡು ಮಾಡಲಾಗಿದೆ.
ಕಟೀಲು ಮುಖ್ಯ ರಸ್ತೆ (ರಥ ಬಿದಿ)ಯಲ್ಲಿ ಮಲ್ಲಿಗೆ ಅಂಗಡಿ ಕ್ರಾಸ್‍ನಿಂದ ದುರ್ಗಾ ಸಂಜೀವಿನಿ ಆಸ್ಪತ್ರೆ ಜಂಕ್ಷನ್ (ಕಲ್ಲಕುಮೇರು ಕ್ರಾಸ್) ವರೆಗೆ ವಾಹನ ಸಂಚಾರ ನಿಲುಗಡೆ ನಿಷೇಧಿಸಿದೆ. ಮಂಗಳೂರಿನಿಂದ ಕಟೀಲಿಗೆ ಬರುವ ವಾಹನಗಳು ಮಲ್ಲಿಗೆ ಅಂಗಡಿ ಕ್ರಾಸ್ ಬಳಿ ಎಡಕ್ಕೆ ಚಲಿಸಿ, ಗಿಡಿಗೆರೆ ರಸ್ತೆ ಮೂಲಕ ಕಟೀಲು ಪಾರ್ಕಿಂಗ್ ಸ್ಥಳಗಳಿಗೆ ಚಲಿಸುವುದು. ಕಟೀಲಿನಿಂದ ಮಂಗಳೂರಿಗೆ ಬರುವ ವಾಹನಗಳು ಕಟೀಲು ಪದವಿ ಪೂರ್ವ ಕಾಲೇಜು ಮೈದಾನದ ಪಕ್ಕದ ರಸ್ತೆಯ ಮೂಲಕ ಬ್ಯಾಂಕ್ ಆಫ್ ಬರೋಡಾ ಎದುರುಗಡೆ ರಸ್ತೆಯಲ್ಲಿ ಚಲಿಸಿ ಬಜಪೆ-ಮಂಗಳೂರು ಕಡೆಗೆ ಸಂಚರಿಸುವುದು.
ಸರ್ವಿಸ್ ಬಸ್ಸು, ಟೂರಿಸ್ಟ್ ಬಸ್ಸು, ಕಾರು ಹಾಗೂ ಇತರ ವಾಹನಗಳಿಗೆ ಬಸ್ ಸ್ಟ್ಯಾಂಡ್ ಹಿಂಭಾಗ ಇರುವ ಸಿತ್ಲಾ ಮೈದಾನ ಹಾಗೂ ಕಟೀಲು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ಹಾಗೂ ಅಪರ ದಂಡಾಧಿಕಾರಿಗಳು ಆಗಿರುವ ಅನುಪಮ್ ಅಗ್ರವಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.