ಕಟೀಲಿನಲ್ಲಿ ಭ್ರಾಮರೀ ಯಕ್ಷಝೇಂಕಾರ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ, ಕುಣಿತ ಭಜನಾ ಸ್ಪರ್ಧೆ
Monday, April 1, 2024
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಎಪ್ರಿಲ್ ೪ ಮತ್ತು ೫ರಂದು ಆಹ್ವಾನಿತ ತಂಡಗಳ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ನಡೆಯಲಿದೆ. ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಉದ್ಘಾಟಿಸಲಿದ್ದು, ತಾ. ೫ರಂದು ಡಾ. ಮೋಹನ ಆಳ್ವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸ್ಪರ್ಧೆಯಲ್ಲಿ ಎಸ್‌ಡಿಎಂ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಮಂಗಳೂರು ತಂಡದಿಂದ ಇಂದ್ರಜಿತು ಕಾಳಗ, ಎಜೆ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕೊಟ್ಟಾರ ತಂಡದಿಂದ ಅಭಿಮನ್ಯು ಕಾಳಗ, ಮಂಗಳೂರು ವಿವಿ ಕಾಲೇಜು ತಂಡದಿಂದ ವರಾಹಾವತಾರ, ವಾಮದಪದವು ಪದವಿ ಕಾಲೇಜು ತಂಡ ಕೃಷ್ಣಾರ್ಜುನ ಕಾಳಗ, ನಿಟ್ಟೆ ಎನ್. ಎಸ್. ಎ.ಎಂ. ಪ್ರಥಮ ದರ್ಜೆ ಕಾಲೇಜು ಗಿರಿಜಾ ಕಲ್ಯಾಣ, ಐಕಳ ಪಾಂಪೈ ಕಾಲೇಜು ಮತ್ಸ್ಯಾವತಾರ, ಮಂಗಳೂರು ರಥಬೀದಿ ಸರಕಾರಿ ಪದವಿ ಕಾಲೇಜು ಕನಕಾಂಗಿ ಕಲ್ಯಾಣ, ಮೂಡುಬಿದ್ರೆ ಆಳ್ವಾಸ್ ಕಾಲೇಜು ಚೂಡಾಮಣಿ, ಕಟೀಲು ಕಾಲೇಜು ರುಕ್ಮಿಣಿ ಕಲ್ಯಾಣ ಪ್ರದರ್ಶಿಸಲಿದೆ ಎಂದು ಪ್ರಕಟಬೆ ತಿಳಿಸಿದೆ.
ತಾ.೬ ರಂದು ಕಟೀಲು ಪದವಿ ಕಾಲೇಜಿನಲ್ಲಿ ಭಕ್ತಿ ಸಿಂಚನ, ರಾಗ ತಾಳಗಳ ಸಮ್ಮಿಲನ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಮಟ್ಟಡ ಭ್ರಾಮರೀ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ೧೨ ಭಜನಾ ತಂಡಗಳು ಭಾಗವಹಿಸಲಿವೆ.