ಶ್ರೀಭ್ರಾಮರಿ ಹವ್ಯಾಸಿ ಯಕ್ಷಗಾನ ಬಳಗದ 9 ನೇ ವಾರ್ಷಿಕೋತ್ಸವ,ಸನ್ಮಾನ ಕಾರ್ಯಕ್ರಮ
Friday, January 26, 2024
ಎಕ್ಕಾರು :ಶ್ರೀಭ್ರಾಮರಿ ಹವ್ಯಾಸಿ ಯಕ್ಷಗಾನ ಬಳಗ ಎಕ್ಕಾರು ಇದರ 9 ನೇ ವರ್ಷದ ವಾರ್ಷಿಕೋತ್ಸವವು ಎಕ್ಕಾರು ಗುಡ್ಡೆಸಾನದ ಬಳಿಯಲ್ಲಿ ಗುರುವಾರ ರಾತ್ರಿ ನಡೆಯಿತು.ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಸರಕಾರ 2023ನೇ ಸಾಲಿನ ಸಹಕಾರ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ 'ಸಹಕಾರ ರತ್ನ 'ಪ್ರಶಸ್ತಿ ಪಡೆದ ಮೋನಪ್ಪ ಶೆಟ್ಟಿ ಎಕ್ಕಾರು ಹಾಗೂ ಸಮಾಜ ಸೇವಕ,ಧಾರ್ಮಿಕ ಮುಖಂಡ ಸಂತೋಷ್ ಕುಮಾರ್ ಹೆಗ್ಡೆ ಎಳತ್ತೂರುಗುತ್ತು ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವರು),ಶ್ರೀ ಭ್ರಾಮರಿ ಹವ್ಯಾಸಿ ಯಕ್ಷಗಾನ ಬಳಗದ ಅಧ್ಯಕ್ಷ ಭರತೇಶ್ ಶೆಟ್ಟಿ ಮಾಡರಮನೆ ಎಕ್ಕಾರು,ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ,ಸಂಪತ್ ಶೆಟ್ಟಿ ನಡ್ಯೋಡಿಗುತ್ತು,ಸಂತೋಷ್ ಶೆಟ್ಟಿ ಮಿತ್ತೊಟ್ಟು ಬಾಳಿಕೆ,ಶ್ಯಾಮ್ ಶೆಟ್ಟಿ ಮೇಲೆಕ್ಕಾರು,ಉದಯ ಪ್ರಕಾಶ್ ನಾಯಕ್ ಎಕ್ಕಾರು,ಗಣೇಶ್ ಪೂಜಾರಿ ನೆಲ್ಲಿತೀರ್ಥ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಭರತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಂತರ ರವಿಕುಮಾರ್ ಮುಂಡಾಜೆ ನಿರ್ದೇಶನದಲ್ಲಿ ಶ್ಯಾಮ ಶೆಟ್ಟಿ ಮೇಲೆಕ್ಕಾರು ಇವರ ಸಂಯೋಜನೆಯಲ್ಲಿ ಶ್ರೀ ಭ್ರಾಮರಿ ಹವ್ಯಾಸಿ ಯಕ್ಷಗಾನ ಬಳಗದ ಸದಸ್ಯರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು