-->

ಮರಾಠಿ ಸಂಭ್ರಮ - ಕೇದಂತ್ ಏಕ್ ದಿನ್ ಕಾರ್ಯಕ್ರಮ

ಮರಾಠಿ ಸಂಭ್ರಮ - ಕೇದಂತ್ ಏಕ್ ದಿನ್ ಕಾರ್ಯಕ್ರಮಬಜಪೆ :ಮಂಗಳೂರು ತಾಲೂಕು ಮರಾಠಿ ಸೇವಾ ಸಂಘ ಗಂಜಿಮಠ ಇದರ ವತಿಯಿಂದ ಮರಾಠಿ ಸಂಭ್ರಮ - ಕೇದಂತ್ ಏಕ್ ದಿನ್ ಕಾರ್ಯಕ್ರಮ ಎಡಪದವಿನ ಕೊರ್ಡೆಲ್ ಕಂಬಳಕೋಡಿ ಮಹಾಕಾಳಿ ಗದ್ದೆಯಲ್ಲಿ ನಡೆಯಿತು.ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಅವರು ತೆಂಗಿನ ಕೊಂಬಿನ ಹಿಂಗಾರವನ್ನು ಅರಳಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತುಳುನಾಡಿನ ಕೃಷಿ ಸಂಸ್ಕೃತಿಯನ್ನು ಬೆಳೆಸುದರ ಜೊತೆಗೆ  ಸಶಕ್ತ ಸದೃಡ ದೇಶ ನಿರ್ಮಾಣ ಮಾಡುವಲ್ಲಿ ಎಲ್ಲಾ ಸಮುದಾಯದ ಪಾತ್ರ ಮುಖ್ಯವಾಗಿದೆ.ಮರಾಠಿ ಸಮಾಜವು ಶೌರ್ಯ ,ಸಾಹಸ  ಮತ್ತು ದೇಶ ಭಕ್ತಿಯ ಉನ್ನತವಾದ ಪರಂಪರೆಯನ್ನು ಹೊಂದಿದೆ ಎಂದರು.


ಮಂಗಳೂರು ತಾಲೂಕು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶೇಖರ್ ಕಡ್ತಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 
ಕಾರ್ಯಕ್ರಮದಲ್ಲಿ ಆಹ್ವಾನಿತ  ದ.ಕ ಮತ್ತು ಉಡುಪಿ ಜಿಲ್ಲೆಯ ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ,ಮಹಿಳೆಯರಿಗೆ ಥ್ರೋಬಾಲ್ ಮತ್ತು ಹಗ್ಗ ಜಗ್ಗಾಟ,50 ಮೀಟರ್ ಓಟ,ಹಿಮ್ಮುಖ ಓಟ,ಲಿಂಬೆಚಮಚ ಓಟ,ಮೂರುಕಾಲಿನ ಓಟ,ಗಂಡ ಹೆಂಡತಿ ಓಟ,ಅಕ್ಕಿಮುಡಿ ಓಟ,ಮಡಿಕೆ ಒಡೆಯುವುದು,ಅಡಿಕೆ ಹಾಳೆ ಓಟ,ನಿಧಿ ಶೋಧ  ಹಾಗೂ ಮನರಂಜನೆಯ ವಿವಿಧ ಸ್ಪರ್ಧೆಗಳು ನಡೆಯಿತು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಹೆಬ್ರಿ ಮಹಾಬಲ ನಾಯ್ಕ್  ಅವರನ್ನು ಈ ಸಂದರ್ಭ ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಮೂಡದ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಲ್ ಮರಾಠಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ವಿಪಿ ನಾಯ್ಕ್  ,ಮರಾಠಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಮಹಾಲಿಂಗ ನಾಯ್ಕ್  ,ಪ್ರಧಾನ ಕಾರ್ಯದರ್ಶಿ ಆಶೋಕ್ ನಾಯ್ಕ್ ಮುಚ್ಚೂರು,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಲಯ ಮ್ಯಾನೇಜರ್ ಪರಮೇಶ್ವರ ನಾಯ್ಕ್  ,ಎಡಪದವು ಗ್ರಾ.ಪಂ ಅಧ್ಯಕ್ಷೆ ಅನಸೂಯ,ಉಪಾಧ್ಯಕ್ಷೆ ಗಂಗಾಧರ ಪೂಜಾರಿ,ಸದಸ್ಯ ಗುಣಪಾಲ್ ನಾಯ್ಕ್  ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807