-->


 ನಿವೃತ್ತ ಉಪನ್ಯಾಸಕ ಸುಬ್ಬರಾವ್ ನಿಧನ

ನಿವೃತ್ತ ಉಪನ್ಯಾಸಕ ಸುಬ್ಬರಾವ್ ನಿಧನ



ಮುಲ್ಕಿ:  ಶಿಮಂತೂರು ನಿವಾಸಿ ನಿವೃತ್ತ ಉಪನ್ಯಾಸಕ ಸುಬ್ಬರಾವ್ (93) ಮಂಗಳವಾರ ಸಂಜೆ ನಿಧನರಾದರು
ಅವರು 2 ಪುತ್ರರು ಹಾಗೂ 3 ಪುತ್ರಿಯರನ್ನ ಅಗಲಿದ್ದಾರೆ.
ಆರಂಭಿಕ ಶೈಕ್ಷಣಿಕ ಹಂತದಲ್ಲಿ ಅವರು 5 ನೆಯ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದು ಬಳಿಕ  ಎಸ್ಎಸ್ಎಲ್ಸಿ ,ಪಿಯುಸಿ, ಬಿಎ, ಬಿಎಡ್,  ಎಂಎ ಶಿಕ್ಷಣವನ್ನು ಖಾಸಗಿಯಾಗಿ ತೇರ್ಗಡೆಯಾದರು.
ಬಳಿಕ ಪ್ರೌಢಶಾಲಾ ಶಿಕ್ಷಕರಾಗಿ ಬಳ್ಳಾರಿ, ಶೃಂಗೇರಿ, ಹಾಸನ, ಕೆಂಚನಹಳ್ಳಿ,ಕನ್ಯಾನದಲ್ಲಿ ಸೇವೆ ಸಲ್ಲಿಸಿದ್ದ ಅವರು ಉಪನ್ಯಾಸಕರಾಗಿ ಮುಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು.
 ಯಕ್ಷಗಾನ ತಾಳಮದ್ದಳೆ ಅರ್ಥದಾರಿಯಾಗಿ, ಪುರಾಣ ಪ್ರವಚನಕಾರರಾಗಿ, ಕನ್ನಡ ಮತ್ತು ಸಂಸ್ಕೃತ ವಿದ್ವಾಂಸರಾಗಿ ,ಅಧ್ಯಾಪಕರಾಗಿ, ಕೃಷಿಕರಾಗಿ , ಪುರೋಹಿತರಾಗಿ ಜನಾನುರಾಗಿಯಾಗಿದ್ದರು  ಅವರ ಸಾಧನೆಗೆ ಕಿನ್ನಿಗೋಳಿಯ ಯಕ್ಷಲಹರಿ ಸಂಸ್ಥೆ ವತಿಯಿಂದ 1998 ರಲ್ಲಿ  ಗೌರವಿಸಲ್ಪಟ್ಟಿದ್ದರು
ಅವರ ನಿಧನಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತು ತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು,ವೇ.ಮೂ. ವಾದಿರಾಜ ಉಪಾಧ್ಯಾಯ ಕೊಲಕಾಡಿ, ಶಿಮಂತೂರು ಶ್ರೀ ಆದಿಯ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿ, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಕಾಸ್ ಶೆಟ್ಟಿ, ಮಾಜೀ ಅಧ್ಯಕ್ಷ ಧನಂಜಯ ಮಟ್ಟು,ಮಾಜೀ
ಉಪಾಧ್ಯಕ್ಷ ಗೋಪಿನಾಥ ಪಡಂಗ, ಅತಿಕಾರಿಬೆಟ್ಟು ಗ್ರಾ.ಪಂ ಸದಸ್ಯ ದಯಾನಂದ ಮಟ್ಟು, ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪೈರ್ ನ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್,
ಶ್ರೀಪತಿ ಭಟ್ ಶಿಮಂತೂರು,  ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ,ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ,ಪತ್ರಕರ್ತ ಪುನೀತ್ ಕೃಷ್ಣ, ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article