ಕಟೀಲು ರಂಗಸ್ಥಳದಲ್ಲಿ ಕಲಾವಿದ ವಿಷ್ಣುಶರ್ಮರ ಮೂರು ಕೃತಿಗಳ ಬಿಡುಗಡೆ.
Saturday, December 9, 2023
ಕಟೀಲು : ಕಟೀಲು ಯಕ್ಷಗಾನ ಮೇಳದ ಕಲಾವಿದ ವಾಟೆಪಡ್ಪು ವಿಷ್ಣು ಶರ್ಮ ಅವರ ಅರ್ಥ ವಿವರಣೆಯ ಸಮುದ್ರಮಥನ- ಮೈರಾವಣ, ಶ್ರೀ ಕೃಷ್ಣ ಪಾರಿಜಾತ - ವಸ್ತ್ರಾಪಹಾರ ದುಸ್ಶಾಸನ ವಧೆ ಹಾಗೂ ಸತ್ಯಹರಿಶ್ಚಂದ್ರ ದಕ್ಷಾಧ್ವರ ಪ್ರಸಂಗಗಳ ಕೃತಿಗಳನ್ನು ಕಟೀಲು ಮೇಳಗಳ ತಿರುಗಾಟ ಸಂದರ್ಭ ರಂಗಸ್ಥಳದಲ್ಲಿ ಬಿಡುಗಡೆಗೊಳಿಸಲಾಯಿತು.
ಆಡಳಿತಮಂಡಳಿ ಅಧ್ಯಕ್ಷ ಸನತ್ ಕುಮಾರ ಶೆಟ್ಟಿ. ಕೃತಿಗಳ ಪ್ರಾಯೋಜಕರಾದ ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಮುಂಬೈ ಉದ್ಯಮಿ ಭಾಸ್ಕರ ಆಳ್ವ. ಅರ್ಚಕರಾದ ಅನಂತ ಆಸ್ರಣ್ಣ. ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ. ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತಿತರರಿದ್ದರು.