ಕಟೀಲು:ಆರೂ ಯಕ್ಷಗಾನ ಮೇಳಗಳ ಸೇವೆಯಾಟ
Friday, December 8, 2023
ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟವು ಗುರುವಾರ ರಾತ್ರಿ ಸೇವೆಯಾಟದೊಂದಿಗೆ ಆರಂಭ ವಾಯಿತು.ದೇವಳದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸುವ ಮೂಲಕವಾಗಿ ತಿರುಗಾಟಕ್ಕೆ ಚಾಲನೆ ನೀಡಿದರು.
ಗಜ್ಜೆ ಮುಹೂರ್ತಕ್ಕೆ ಪೂರ್ವಭಾವಿ ಯಾಗಿ ದೇವಸ್ಥಾನದ ಒಳಗಿನ ಗೋಪುರದಲ್ಲಿ ಎಲ್ಲಾ ಆರು ಮೇಳಗಳ ಪ್ರಧಾನ ಭಾಗವತರು ಹಿಮ್ಮೇಳ ಸಹಿತ ಭಾಗವತಿಕೆಯ ಮೂಲಕ ತಾಳಮದ್ದಳೆ ನಡೆಯಿತು.
ಈ ವರ್ಷದ ತಿರುಗಾಟದಲ್ಲಿ ಆರು ಮೇಳಗಳು ಕಾಲಮಿತಿಯಲ್ಲಿ ಪ್ರದರ್ಶನಗೊಳ್ಳಲಿದೆ.
ಆರು ಮೇಳಗಳು ಪ್ರತಿದಿನ 5:45 ಕ್ಕೆ ಚೌಕಿ ಪೂಜೆಯಾಗಿ ನಂತರ ಪ್ರದರ್ಶನ ಆರಂಭ ಗೊಂಡು ರಾತ್ರಿ 12 ಗಂಟೆ ಸಮಾಪ್ತಿಯಾಗಲಿದೆ.
ಈ ಸಂದರ್ಭ ದೇವಳದ ಮೊಕ್ತೇಸರ ವೆ. ಮೂ. ವಾಸುದೇವ ಆಸ್ರಣ್ಣ , ಮೊಕ್ತೇಸರ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಆರೂ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ , ಲಕ್ಷ್ಮೀನಾರಾಯಣ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ , ಕಮಲಾದೇವಿ ಪ್ರಸಾದ್ ಆಸ್ರಣ್ಣ , ಹರಿನಾರಾಯಣ ದಾಸ ಆಸ್ರಣ್ಣ , ವೇದವ್ಯಾಸ ತಂತ್ರಿ , ಮೋಹನ್ ರಾವ್, ಕಟೀಲು ಶ್ರೀದುರ್ಗಾಪರಮೇಶ್ವರೀ ಯಕ್ಷ ಧರ್ಮ ಭೋಧಿನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾಘವೇಂದ್ರ ಆಚಾರ್ ಬಜ್ಪೆ , ಐಕಳ ಹರೀಶ್ ಶೆಟ್ಟಿ , ಚರಣ್ ಜೆ ಶೆಟ್ಟಿ ಕುಳಾಯಿ ಗುತ್ತು, ಮಿಥುನ್ ರೈ, ಐವನ್ ಡಿಸೋಜ, ಐಕಳ ಗಣೇಶ್ ಶೆಟ್ಟಿ , ಪ್ರಸನ್ನ ಶೆಟ್ಟಿ ಅತ್ತೂರು ಗುತ್ತು, ಗಿರೀಶ್ ಶೆಟ್ಟಿ ಕುಡ್ತಿಮಾರ ಗುತ್ತು, ವೇದವ್ಯಾಸ ಉಡುಪ, ವಾಸುದೇವ ಶಿಬರಾಯ, ಆತ್ತೂರು ಬೈಲು ವೆಂಕಟರಾಜ ಉಡುಪ, ಪ್ರದ್ಯುಹ್ನರಾವ್ ಶಿಬರೂರು, ಜಯರಾಮ ಮುಕ್ಕಾಲ್ದಿ, ಪದ್ಮನಾಭ ಕಟೀಲು, ಪುರುಷೋತ್ತಮ ಶೆಟ್ಟಿ , ದೊಡ್ಡಯ್ಯ ಮೂಲ್ಯ ಕಟೀಲು , ಭುವನಾಭಿರಾಮ ಉಡುಪ , ಶ್ರೀಧರ ಆಳ್ವ ಮಾಗಂದಡಿ, ಕೆ. ವಿ. ಶೆಟ್ಟಿ ಕೋಡೆತ್ತೂರು, ಸುರೇಶ್ ಶೆಟ್ಟಿ ದೇವಸ್ಯ, ಪುರಂದರ ಶೆಟ್ಟಿ , ಕೆ. ಎಲ್ . ಕುಂಡಾಂತಾಯ , ಬೊಂಡಾಲ ಸಚ್ಚಿದಾನಂದ ಶೆಟ್ಟಿ , ಭಾಸ್ಕರ ಆಳ್ವ ಮುಂಬಯಿ, ಲೋಕಯ್ಯಸಾಲಿಯಾನ್ ಕೊಂಡೇಲ, ಹರೀಶ್ ಶೆಟ್ಟಿ ಜಲಕದ ಕಟ್ಟೆ ಅಜಾರು , ರಾಮದಾಸ ಕಾಮತ್, ಗಂಗಾಧರ ಸಾಲ್ಯಾನ್ ಎಕ್ಕಾರು, ಅತ್ತೂರು , ಕೊಡೆತ್ತೂರು ಮಾಗಣೆಯ ಗ್ರಾಮಸ್ಥರು ಮತ್ತಿತರರು ಇದ್ದರು.