ಕೆಂಚನಕೆರೆ: ಮಕ್ಕಳ ದಿನಾಚರಣೆ; ಸಾಧಕರಿಗೆ ಗೌರವ
Wednesday, November 15, 2023
ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿ ಟ್ರಸ್ಟ್ ಹಾಗೂ ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪೈರ್ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಕೆಂಚನಕೆರೆ ಕಾಮತ್ ಕಾಂಪೌಂಡ್ ನಲ್ಲಿ ನಡೆಯಿತು.
ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪರ ನ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಮಾತನಾಡಿ ಸೇವಾ ಸಂಸ್ಥೆಗಳ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯುತ್ತಿದ್ದು ಇದು ಇತರ ಮಕ್ಕಳಿಗೂ ಪ್ರೇರಣೆಯಾಗಿ ಸಾಧನೆ ನಿರಂತರವಾಗಿ ನಡೆಯಲಿ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಿಲ್ಪಾಡಿ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾ ಟ್ರಸ್ಟ್ ನ ಸಂಚಾಲಕ ಪುನೀತ್ ಕೃಷ್ಣ ಮಾತನಾಡಿ ಸೇವಾ ಟ್ರಸ್ಟ್ ನಿಂದ ಅನೇಕ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಸಾಧನೆ ಮಾಡಿ ರಾಷ್ಟ್ರೀಯ ಮಟ್ಟಕ್ಕೆ ತೇರ್ಗಡೆಯಾದ ಮಾಧವ ಕಾಮತ್ ಕೆಂಚನಕೆರೆ ರವರನ್ನು ಗೌರವಿಸಲಾಯಿತು.
ಈ ಸಂದರ್ಭ ಪತ್ರಕರ್ತ ರಘುನಾಥ ಕಾಮತ್, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಪ್ರತಿಭಾ ಹೆಬ್ಬಾರ್, ಶಿವಪ್ರಸಾದ್, ಅಶ್ವಿನಿ, ಶಿವಾನಿ, ಸಾಧನ,ಶ್ರೀಧರ್ ಕಾಮತ್, ಸುಧಾ ಕಾಮತ್, ಸ್ಮಿತಾ ಕಾಮತ್, ಶ್ರೇಯ ಕಾಮತ್, ಜನಾರ್ದನ್, ವಿವೇಕ್ ,ವಿಖ್ಯಾತ ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳ ದಿನಾಚರಣೆ ಅಂಗವಾಗಿ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ರಘುನಾಥ ಕಾಮತ್ ನಿರೂಪಿಸಿದರು.
Advertise: