-->

ವಿದ್ಯಾರ್ಥಿಗಳ ಸಾಧನೆಗೆ  ಪ್ರೊತ್ಸಾಹವಿರಲಿ ಡಾ.ಹರಿಕೃಷ್ಣ ಪುನರೂರು

ವಿದ್ಯಾರ್ಥಿಗಳ ಸಾಧನೆಗೆ ಪ್ರೊತ್ಸಾಹವಿರಲಿ ಡಾ.ಹರಿಕೃಷ್ಣ ಪುನರೂರು

ಮೂಲ್ಕಿ:ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಉದ್ದೇಶ ಮುಂದಿನ ಪೀಳಿಗೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷವಾದ ಜವಾಬ್ದಾರಿಯನ್ನು ವಹಿಸುವುದಾಗಿದೆ. ಮಕ್ಕಳ ಸಾಧನೆಗೆ ಪ್ರೋತ್ಸಾಹಿಸುತ್ತಾ ಮುಂದೆ ಅವರು ಸಾಮಾಜಿಕವಾಗಿ ಇತರರಿಗೆ ನೆರವಾಗುವ ಹೊಣೆಯನ್ನು ನೀಡುತ್ತಿದ್ದೇವೆ. ಬರೀ ವಿದ್ಯೆ ಇದ್ದರೆ ಸಾಲದು ಸನ್ನಡತೆ, ಸಂಸ್ಕಾರ,  ವಿವೇಕವು ಸಹ ಇರಬೇಕು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಪಠ್ಯೇತರ ಕ್ಷೇತ್ರಗಳಲ್ಲಿ ಇತರರಿಗೆ ಮಾದರಿಯಾಗುವಂತೆ ಸಾಧಕರಾದ ಬೇಕು ಹಾಗೂ ಸೇವಾ ಮನೋಭಾವ ಹಾಗೂ ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚುವ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ಶ್ರೀ ಶಾರದಾ ಸೊಸೈಟಿಯ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.

ಅವರು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಇವರ ವತಿಯಿಂದ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಶಿಮಂತೂರಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಲ. ವೆಂಕಟೇಶ್ ಹೆಬ್ಬಾರ್ ಭಾಗವಹಿಸಿ, ಪೋಷಕರು ಮಕ್ಕಳಿಗೆ ಸರ್ವಸ್ವವನ್ನು ಧಾರೆ ಎರೆಯುತ್ತಾರೆ ಅದಕ್ಕೆ ತಕ್ಕಂತೆ ಮಕ್ಕಳು ಪೋಷಕರಿಗೆ ಮತ್ತು ಊರಿಗೆ ಕೀರ್ತಿ ತರುವಂತಹ ಸಾಧನೆಯನ್ನು ಮಾಡಬೇಕು, ಶಿಕ್ಷಣದೊಂದಿಗೆ ಇತರ ಚಟುವಟಿಕೆಗೆ ಒತ್ತು ಕೊಡುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.

 ಕಾರ್ಯಕ್ರಮದಲ್ಲಿ ಕರಾಟೆಯಲ್ಲಿ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪಡೆದ ಸಂಸ್ಥೆಯ ವಿದ್ಯಾರ್ಥಿಗಳಾದ ತನುಶ್ರೀ ಕೋಟ್ಯಾನ್,  ಇಶಿತ್ ಶೆಟ್ಟಿಗಾರ್, ಪ್ರತೀಕ್ ಭಟ್, ಅನ್ವಿತಾ, ಖುಷಿ ಹಾಗೂ ಅಮಿತ್  ಹಾಗೂ  ಸಂಸ್ಥೆಯ ಕರಾಟೆ ತರಬೇತಿದಾರ  ನಾಗರಾಜ್ ಕುಲಾಲ್ ರನ್ನು  ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಸೊಸೈಟಿಯ ಕೋಶಾಧಿಕಾರಿ ಕೊ. ಭುವನಾಭಿರಾಮ ಉಡುಪ, ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಇದರ ಅಧ್ಯಕ್ಷ ಲ. ಸುಧೀರ್ ಬಾಳಿಗ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲ  ಜಿತೇಂದ್ರ ವಿ ರಾವ್ ವಂದಿಸಿದರು, ಸಹ ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807