ಬಜಪೆ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್
Monday, October 30, 2023
ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ 1.92 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಿರುವ ಬಜಪೆ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಭಾನುವಾರದಂದು ಉದ್ಘಾಟಿಸಿದರು.
ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ,ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ,ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ,ಡಿಐಜಿ ಡಾ.ಚಂದ್ರಗುಪ್ತ,ಡಿಸಿಪಿ ದಿನೇಶ್ ಕುಮಾರ್,ಎಸಿಪಿ ಮನೋಜ್ ಕುಮಾರ್,ಮಾಜಿ ಸಚಿವ ರಮಾನಾಥ ರೈ,ಇನಾಯತ್ ಆಲಿ, ಎಂಎಲ್‌ಸಿಗಳಾದ ಹರೀಶ್ ಕುಮಾರ್ ಮತ್ತು ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹಿರಿಯ ಪೊಲೀಸ್ ಅಧಿಕಾರಿಗಳು, ಕೆಎಸ್‌ಪಿಎಚ್ & ಐಡಿಸಿಎಲ್(ಬೆಂಗಳೂರು) ಮುಖ್ಯ ಇಂಜಿನಿಯರ್ ಮಂಜುನಾಥ ಬಿ. ಎಚ್, ಸ್ಥಳೀಯ ಮುಖಂಡರು, ಉದ್ಯಮಿಗಳು, ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು ಹಾಗೂ ಸದಸ್ಯರು, ರಾಜಕೀಯ ಮುಖಂಡರುಗಳು, ಬಜಪೆ ಠಾಣೆಯ ಪೊಲೀಸ್ ಸಿಬ್ಬಂದಿ ವರ್ಗ ,ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು,ಗಣ್ಯರು ಹಾಗೂ ಪ್ರಮುಖರುಗಳು ಉಪಸ್ಥಿತರಿದ್ದರು.