ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕುರ್ಚಿ ವಿತರಣೆ
Friday, September 8, 2023
ಮೂಲ್ಕಿ:ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ವತಿಯಿಂದ ಮೂಲ್ಕಿಯ ಅಮೃತಮಯೀ ನಗರದ ಅಂಬೆಡ್ಕರ್ ಭವನದ ಅಂಗನವಾಡಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕದ ಜೊತೆಗೆ ಮಕ್ಕಳಿಗೆ ಕುಳಿತುಕೊಳ್ಳಲು ಕುರ್ಚಿಗಳನ್ನು ವಿತರಿಸುವ ಕಾರ್ಯಕ್ರಮವು ಸೆ.8 ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲ. ಸುಧೀರ್ ಎನ್ ಬಾಳಿಗ ಅವರು ಮಕ್ಕಳ ಆರೋಗ್ಯ ನಮ್ಮ ಆದ್ಯ ಕರ್ತವ್ಯ, ಪುಟಾಣಿಗಳಿಗಾಗಿ ಇಷ್ಟ ಪಟ್ಟು ಕೊಟ್ಟ ಪುಟ್ಟ ಕೊಡುಗೆ ಇದಾಗಿದೆ ಎಂದರು.
ಬಪ್ಪನಾಡು ಲಯನ್ಸ್ ಸ್ಥಾಪಕಾಧ್ಯಕ್ಷ ಲ. ವೆಂಕಟೇಶ್ ಹೆಬ್ಬಾರ್, ವಲಯಾಧ್ಯಕ್ಷೆ ಲ. ಪ್ರತಿಭಾ ಹೆಬ್ಬಾರ್, ಕಾರ್ಯದರ್ಶಿ ಲ. ಪುಷ್ಪರಾಜ್ ಚೌಟ, ಜೇಸಿಐ ನಿಕಟಪೂರ್ವ ಅಧ್ಯಕ್ಷ ಕಲ್ಲಪ್ಪ ತಡವಲಗ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಸುಲೋಚನ, ಮುಲ್ಕಿ ನಗರ ಪಂಚಾಯತ್ ಸದಸ್ಯೆ ಶಾಂತ.ಜಿ. ಕಿರೋಡಿಯನ್, ಭೀಮರಾವ್ ಯುವ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕೊಯ್ಯಾರ್ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ರೇಣುಕಾ ಹಾಗೂ ಮೊದಲಾದವರು ಉಪಸ್ಥಿತಿರಿದ್ದರು. ಹೊಸ ಅಂಗನವಾಡಿಗೆ ವಾಟರ್ ಫಿಲ್ಟರ್, ಕುರ್ಚಿಗಳು ಹಾಗೂ ಟೇಬಲ್ ನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.