-->


ಎಕ್ಕಾರು ವಿಜಯ ಯುವ ಸಂಗಮದಿಂದ 77ನೇ ಸ್ವಾತಂತ್ರ್ಯೋತ್ಸವ

ಎಕ್ಕಾರು ವಿಜಯ ಯುವ ಸಂಗಮದಿಂದ 77ನೇ ಸ್ವಾತಂತ್ರ್ಯೋತ್ಸವ

ವಿಜಯ ಯುವ ಸಂಗಮ (ರಿ) ಎಕ್ಕಾರು ಇದರ ವತಿಯಿಂದ 77ನೇ  ಸ್ವಾತಂತ್ರ್ಯ ದಿನಾಚರಣೆಯು  ಎಕ್ಕಾರು ದ್ವಾರದ ಬಳಿ ಮಂಗಳವಾರದಂದು ನಡೆಯಿತು.  ಶೇಖರ್ ಶೆಟ್ಟಿ ಕಲ್ಪವೃಕ್ಷ ಅವರು ಸ್ವಾತಂತ್ರ್ಯೋತ್ಸವದ ಅಂಗವಾಗಿ  ಧ್ವಜಾರೋಹಣಗೈದರು.  ಸಂಸ್ಥೆಯ ಗೌರವಾಧ್ಯಕ್ಷ  ರತ್ನಾಕರ ಶೆಟ್ಟಿ, ಅಧ್ಯಕ್ಷ ವಿನೋದ್ ಶೆಟ್ಟಿ, ಎಕ್ಕಾರು ಗ್ರಾ.ಪಂ. ಸದಸ್ಯರಾದ  ವಿಕ್ರಮ್ ಮಾಡ, ಸತೀಶ್ ಶೆಟ್ಟಿ, ಅನಿಲ್ ಹಾಗೂ ಪದ್ಮಾಕ್ಷಿ ಎಕ್ಕಾರು, 
ಸಂಗಮದ ಸರ್ವ ಸದಸ್ಯರು, ಹಾಗೂ ಊರಿನ ನಾಗರಿಕರು
ಉಪಸ್ಥಿತರಿದ್ದರು.  ರಾಜೇಂದ್ರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. 
 ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮವನ್ನು  ಸಂಪನ್ನ ಗೊಳಿಸಲಾಯಿತು.



ಬೈಕ್ ಜಾಥಾ:


ಧ್ವಜಾರೋಹಣದ ನಂತರ ಸಂಗಮದ ಸದಸ್ಯರಿಂದ ಕಟೀಲು ಮಾರ್ಗವಾಗಿ ಕಿನ್ನಿಗೋಳಿ ತನಕ ಬೈಕ್ ಜಾಥ  ನಡೆಯಿತು. 
ಹಾಗೂ ನಿವೃತ್ತ ಸೇನಾನಿ ಶ್ರೀನಿವಾಸ್ ಕುಲಾಲ್  ಅವರನ್ನು ಅವರ ಸ್ವಗೃಹ ಮುಂಚೂರು  ಸುರತ್ಕಲ್ ನಲ್ಲಿ ಸನ್ಮಾನಿಸಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article