ನೆಲಚ್ಚಿಲ್ ಅಂಗನವಾಡಿ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ
Wednesday, August 16, 2023
ಮುತ್ತೂರು:ನೆಲಚ್ಚಿಲ್ ಅಂಗನವಾಡಿ ಕೇಂದ್ರದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯು ನಡೆಯಿತು.ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ನೂತನವಾಗಿ ಆಯ್ಕೆಗೊಂಡಿರುವ ಮುತ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷ ಪ್ರವೀಣ್ ಆಳ್ವ, ಉಪಾಧ್ಯಕ್ಷ ಶ್ರೀಮತಿ ಸುಶ್ಮಾ ಹಾಗೂ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ ಅವರನ್ನು ಅಂಗವಾಡಿ ಕೇಂದ್ರದ ವತಿಯಿಂದ ಅಭಿನಂದಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪಾ ನಾಯ್ಕ್ , ಶೇಖರ್ ನೆಲಚ್ಚಿಲ್ ,ಅಂಗವಾಡಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.