-->
ತೋಕೂರು ಶ್ರೀಸುಬ್ರಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ

ತೋಕೂರು ಶ್ರೀಸುಬ್ರಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ



ತೋಕೂರು : ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 21ರ ಸೋಮವಾರದಂದು ನಾಗರ ಪಂಚಮಿ ಹಬ್ಬವನ್ನು  ಆಚರಿಸಲಾಯಿತು. 
ಬೆಳಿಗ್ಗೆ 11ರಿಂದ ಭಕ್ತರು ಸಮರ್ಪಿಸಿದ ವಿಶೇಷ
ಸೀಯಾಳಾಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ
ನಡೆದು, ನಾಗದೇವರ ಪ್ರಸಾದ ವಿತರಿಸಿ, ಮಧ್ಯಾಹ್ನ
1ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.
ನೂರಾರು ಭಕ್ತರು ತಮ್ಮ ಹರಕೆಯನ್ನು ವಿವಿಧ ಸೇವಾ
ರೂಪದಲ್ಲಿ ನೀಡಿದರು. ಕ್ಷೇತ್ರದ ಪ್ರಧಾನ ಅರ್ಚಕ
ಮಧುಸೂಧನ ಆಚಾರ್ಯ ಅವರ  ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ
ಹರಿದಾಸ್ ಭಟ್ ಹಾಗು ಮೊದಲಾದವರು ಹಾಜರಿದ್ದರು.

Ads on article

Advertise in articles 1

advertising articles 2

Advertise under the article