-->

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಬ್ರಹ್ಮ ಶ್ರೀ ನಾರಾಯಣ ಗುರುಗಳ ೧೬೯ನೇ ಜನ್ಮ ದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ,ಭಜನಾ ಸಂಕೀರ್ತಣೆ ೩೦ ರಿಂದ ೩೧ ರ ವರೆಗೆ

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಬ್ರಹ್ಮ ಶ್ರೀ ನಾರಾಯಣ ಗುರುಗಳ ೧೬೯ನೇ ಜನ್ಮ ದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ,ಭಜನಾ ಸಂಕೀರ್ತಣೆ ೩೦ ರಿಂದ ೩೧ ರ ವರೆಗೆ

ಮುಲ್ಕಿ :ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ  ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ೧೬೯ನೇ ಜನ್ಮ ದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಆಗಸ್ತ್ ೩೦ರಿಂದ ೩೧ ರ ವರೆಗೆ ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರಗಲಿದೆ.
ಆಗಸ್ತ್ ೩೧ ರ ಬುಧವಾರ ಬೆಳಿಗ್ಗೆ  ೬.೩೦ರಿಂದ ರಾತ್ರಿ ೮ ರ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರಗಲಿದ್ದು ಬೆಳಿಗ್ಗೆ ೬.೩೦ಕ್ಕೆ ಭಜನಾ ಜ್ಯೋತಿಯನ್ನು ಬಿಲ್ಲವ ಸಂಘ (ರಿ) ಹೆಜಮಾಡಿಯ ಅಧ್ಯಕ್ಷ ಲೋಕೇಶ್ ಅಮೀನ್ ರವರು ಉದ್ಘಾಟಿಸಲಿದ್ದಾರೆ.ರಾತ್ರಿ ೮ ಗಂಟೆಗೆ  ಭಜನಾ ಮಂಗಲೋತ್ಸವ ಜರಗಲಿದ್ದು ಆಗಸ್ತ್ ೩೧ ರ ಬೆಳಿಗ್ಗೆ ೬.೩೦ರಿಂದ ೧೦.೩೦ ರವರೆಗೆ ಸಂಘದ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಹಾಗೂ ಶ್ರೀ ನಾರಾಯಣ ಗುರು ಮಹಿಳಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ,ಬೆಳಿಗ್ಗೆ ೧೦.೩೦ರಿಂದ ಸಭಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಜರಗಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ ಪ್ರಕಾಶ್ ಸುವರ್ಣ ವಹಿಸಲಿದ್ದು  ಶಾಸಕ ಉಮಾನಾಥ ಕೋಟ್ಯಾನ್ ರವರು ವಿದ್ಯಾರ್ಥಿ ವೇತನ ವಿತರಣೆ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್  ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ವಿತರಿಸಲಿದ್ದು ಉದ್ಯಮಿ .ಅಶೋಕ್ ಟ್ಯೆಲರ್‍ಸ್  ನ ಮಾಲಕ ಶಶಿಧರ್ ಕೋಟ್ಯಾನ್ ರವರು ಎನ್ ಆರ್ ಮೂಲ್ಕಿ ಸ್ಮರಣಾರ್ಥ ವಿದ್ಯಾ ನಿದಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.ಮೂಲ್ಕಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ವಾಸುದೇವ ಬೆಳ್ಳೆಯವರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದು ವಿಧಾನ ಪರಿಷತ್ ಸದಸ್ಯರುಗಳಾದ  ಕೋಟ ಶ್ರೀನಿವಾಸ ಪೂಜಾರಿ,  ಹರೀಶ್ ಕುಮಾರ್ ಮತ್ತು ಮೂಲ್ಕಿ ನಗರ ಪಂಚಾಯತ್ ಸದಸ್ಯ ಹರ್ಷರಾಜ್ ಶೆಟ್ಟಿ ಜಿ.ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಕಾರ್ಯಕ್ರಮದಲ್ಲಿ ಮೂಲ್ಕಿ ಬಿಲ್ಲವ ಸಂಘದ ವ್ಯಾಪ್ತಿಯ ಸಮಾಜದ ಪ್ರತಿಭಾವಂತ ವಿದ್ಯಾಥಿಗಳಗೆ ಗೌರವಾರ್ಪಣೆ ನಡೆಯಲಿದೆ.ಮಧ್ಯಾಹ್ನ  ಅನ್ನಸಂತರ್ಪಣೆ,ಮಧ್ಯಾಹ್ನ ೩ ಗಂಟೆಗೆ ಬ್ರಹ್ಮ ಶ್ರೀ  ನಾರಾಯಣಗುರುಗಳ ಭಾವಚಿತ್ರದ ಶೋಭಾಯಾತ್ರೆಯು ಕೊಳಚಿಕಂಬಳ ಗ್ರಾಮಸ್ಥರ ಕೂಡುವಿಕೆಯೊಂದಿಗೆ ಶ್ರೀಮತಿ ಶಾಂತ ಸಹದೇವ ಕರ್ಕೇರರ  ನಿವಾಸ ಸಾಯಿ ಪಾದ  ಕೊಳಚಿಕಂಬಳ ದಲ್ಲಿ  ಗುರುಪೂಜೆಯಾಗಿ ಕಟ್ಟದಂಗಡಿ- ಒಡೆಯರಬೆಟ್ಟು- ಹೊಸಪೇಟೆ- ಬಪ್ಪನಾಡು ದೇವಸ್ಥಾನ- ಪಂಚಮಹಲ್ ಕೆನರಾ ಬ್ಯಾಂಕ್ ರಸ್ತೆ-ಮೂಲ್ಕಿ ಬಸ್ ನಿಲ್ದಾಣವಾಗಿ ಸಂಘವನ್ನು ತಲುಪಿ ಮಹಾ ಪೂಜೆಯಾಗಿ ಪ್ರಸಾದ ವಿತರಣೆ ,ಅನ್ನ ಪ್ರಸಾದ ನಡೆಯಲಿದೆಯೆಂದು ಪ್ರಕಟಣೆ ತಿಳಿಸಿದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807