-->

ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯಾರ್ ನ ಚಾರ್ಟರ್ ನೈಟ್ ಆಚರಣೆ

ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯಾರ್ ನ ಚಾರ್ಟರ್ ನೈಟ್ ಆಚರಣೆಮೂಲ್ಕಿ: ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯಾರ್ ನ ಚಾರ್ಟರ್ ನೈಟ್ ಸಮಾರಂಭವು ಬಪ್ಪನಾಡಿನ ದೇವಾಡಿಗರ ಸಭಾಭವನದಲ್ಲಿ ಜರಗಿತು. ಲಯನ್ ಸುದೀರ್ ಎನ್ ಬಾಳಿಗ  ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಲಯನ್ ಪ್ರಶಾಂತ್ ಶೆಟ್ಟಿ  ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಧ್ಯೇಯ ಉದ್ದೇಶ ಸೇವಾ ಸಾಂಗತ್ಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಪುಷ್ಪರಾಜ್ ಚೌಟ ಅವರು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯಾರ್ ಕ್ಲಬ್  ನಡೆದು ಬಂದ ದಾರಿ ಸೇವಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಗಿಲ್ ವಿಜಯೋತ್ಸವದ ನೆನಪಿಗಾಗಿ ಕಾರ್ಗಿಲ್ ವೀರಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು ಈ ಸಂದರ್ಭ ಕಾರ್ಗಿಲ್ ಯೋಧರಾದ ಮುಲ್ಕಿ ಕಿಲ್ಪಾಡಿಯ ಮಾಧವ ಪರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸ್ಥಾಪಕ ಅಧ್ಯಕ್ಷ  ಲಯನ್ ವೆಂಕಟೇಶ ಹೆಬ್ಬಾರ್ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಸಹಕರಿಸಿದ ಸದಸ್ಯರನ್ನು ಹಾಗೂ ಸ್ಥಾಪಕ ಸದಸ್ಯರನ್ನು ಗುರುತಿಸಿ ಗೌರವಿಸಿದರು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಪ್ರಶಾಂತ್ ಶೆಟ್ಟಿ ಪ್ರಾಂತ್ಯ ಅಧ್ಯಕ್ಷ  ಲಯನ್ ಹೆರಾಲ್ಡ್ ತೌರೊ, ವಲಯಾಧ್ಯಕ್ಷ  ಲಯನ್ ಪ್ರತಿಭಾ ಹೆಬ್ಬಾರ್, ಲಯನ್ ಎಂ ಕೆ ದಿನೇಶ್, ಗೈಡಿಂಗ್ ಲಯನ್ ಸ್ಟಾನಿ ಮಿರಾಂಡಾ, ಕೋಶಾಧಿಕಾರಿ ಲಯನ್ ಬಿ ಶಿವಪ್ರಸಾದ್ ಉಪಸ್ಥಿತರಿದ್ದರು. ಲಯನ್ ದೀಕ್ಷಿತ ಹಾಗೂ ವಿಶ್ವನಾಥ್ ಶೆಣೈ ಕಾರ್ಯಕ್ರಮ ನಿರೂಪಿಸಿದರು ಲಯನ್ಸ್ ಜಿಲ್ಲೆಯಲ್ಲಿ ಪ್ರಥಮ ವರ್ಷ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯಾರ್ ಪ್ರಥಮ ಸ್ಥಾನ ಪಡೆದ ವಿಜಯೋತ್ಸವ ಕೇಕ್ ಕಟ್ ಮಾಡುವ ಮೂಲಕ ಹಾಗೂ ಸ್ಥಾಪಕ ಅಧ್ಯಕ್ಷರ 20ನೇ ವಿವಾಹ ವಾರ್ಷಿಕೋತ್ಸವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು ಸಭಾ ಕಾರ್ಯಕ್ರಮದ ತರುವಾಯ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯಾರ್  ಸದಸ್ಯ ಡಸ್ಲರ್ಸ್ ಸ್ಟುಡಿಯೋ ಮಾಲಕ ಲಾಯನ್ ರಜತ್ ಕುಮಾರ್ ರವರ ತಂಡದಿಂದ ನೃತ್ಯ ಕಾರ್ಯಕ್ರಮ ಜರಗಿತು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807