-->

ಕಟೀಲು: ದಿ.ಗೋಪಾಲಕೃಷ್ಣ ಅಸ್ರಣ್ಣರ ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಕಟೀಲು: ದಿ.ಗೋಪಾಲಕೃಷ್ಣ ಅಸ್ರಣ್ಣರ ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ





 ಕಟೀಲು: ದಿ.ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮವು  ಶನಿವಾರ ಸಂಜೆ ಕಟೀಲು  ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನದಲ್ಲಿ ನಡೆಯಿತು 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಶ್ರೀ ದುರ್ಗಾಪರಮೇಶ್ವರಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಿರ್ದೇಶಕ ಡಾ.ಜಯರಾಮ ಶೆಟ್ಟಿ ವಹಿಸಿದ್ದರು.
ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾಕರ ರಾವ್ ಪೇಜಾವರ ಸಂಸ್ಮರಣಾ ಭಾಷಣ ಮಾಡಿದರು
ಕಟೀಲು ದೇವಳದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಮುಂಬೈ ಉದ್ಯಮಿ ಏಳಿಂಜೆ ಕೋಂಜಾಲುಗುತ್ತು, ಅನಿಲ್ ಶೆಟ್ಟಿ , ಡಾ. ಅರುಣೋದಯ ಎಸ್. ರೈ, ಬೆಳಿಯೂರುಗುತ್ತು,ಪುತ್ತೂರು, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ, ಮಂಗಳೂರು ಮಲಬಾರ್ ಗೋಲ್ಡ್ ನ ನಿರ್ದೇಶಕ ಕರುಣಾಕರನ್ ಪಿ. ಬಿ.,ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ಯುಗಪುರುಷ ಸಂಪಾದಕ ಕೊಡೆತ್ತೂರು  ಭುವನಾಭಿರಾಮ ಉಡುಪ,ಮಾಜೀ ದಾರ್ಮಿಕ ಪರಿಷತ್ ಸದಸ್ಯ ಗಿರಿ ಪ್ರಕಾಶ್ ತಂತ್ರಿ ಪೊಳಲಿ, ಸಾಯಿನಾಥ ಶೆಟ್ಟಿ ಮುಂಡ್ಕೂರು, ಸೋಮಪ್ಪ ಅಲಂಗಾರು, ಪುರುಷೋತ್ತಮ ಶೆಟ್ಟಿ ಕಿನ್ನಿಗೊಳಿ,ಯೋಗೀಶ್ ರಾವ್ ಎಳಿಂಜೆ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು
 ಉದ್ಯಮಿ ಮೋಹನ್ ಮೆಂಡನ್, ಪು.ಗುರುಪ್ರಸಾದ್ ಭಟ್ ಕಟೀಲು,ಅಶ್ವತ್ಥ್ ರಾವ್, ಆದಿಶಕ್ತಿ ಕಲ್ಕುಡ ಕಲ್ಲುರ್ಟಿ ದೇವಸ್ಥಾನ ದ ಧರ್ಮದರ್ಶಿ ನೀಲಯ್ಯ ಪೂಜಾರಿ , ಜಯಂತಿ ಆಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು 
ಕಾರ್ಯಕ್ರಮದಲ್ಲಿ ದಿ| ಗೋಪಾಲಕೃಷ್ಣ ಆಸ್ರಣ್ಣಅರ್ಚಕ ಪ್ರಶಸ್ತಿಯನ್ನು. ಮಂಗಳೂರು ನೆಲ್ಲಿಕಾಯಿ ಶ್ರೀ ರಾಘವೇಂದ್ರ ಮಠದ ಅರ್ಚಕ ವೇ.ಮೂ. ಜಯರಾಮ ಉಡುಪರಿಗೆ ನೀಡಲಾಯಿತು.
 ದಿ| ಗೋಪಾಲಕೃಷ್ಣ ಆಸ್ರಣ್ಣ ಮೊಕ್ತೇಸರ ಪ್ರಶಸ್ತಿಯನ್ನು ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ. ಬ್ರಹ್ಮಶ್ರೀ ನರಸಿಂಹ ತಂತ್ರಿಗಳಿಗೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬೋಳೂರು ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ರಮಾನಾಥ ಹೆಗ್ಡೆ   ರವರಿಗೆ  ವಿಶೇಷ ಗೌರವಾರ್ಪಣೆ ನಡೆಯಿತು
ಕದ್ರಿ ಆಸ್ರಣ್ಣ ಅಭಿಮಾನಿ ಬಳಗ ಕದ್ರಿಯ ವತಿಯಿಂದ  ದಿ.ಗೋಪಾಲಕೃಷ್ಣ ಆಸ್ರಣ್ಣ ಕಲಾವಿದ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ  ಶ್ರೀಧರ ಪೂಜಾರಿ ಪಂಜಾಜೆಯವರಿಗೆ ನೀಡಿ ಸನ್ಮಾನಿಸಲಾಯಿತು ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಡಾ. ರಮ್ಯಾ ರವಿತೇಜ ನಿರೂಪಿಸಿದರು. ಗೋಪಾಲಕೃಷ್ಣ ಆಸ್ರಣ್ಣ ಧನ್ಯವಾದ ಅರ್ಪಿಸಿದರು.
ಬಳಿಕ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.) ನಿಡ್ಲೆ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಕೃಷ್ಣಲೀಲೆ-ಕಂಸವಧೆ ,ಕನಕಾಂಗಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807