ಮುಲ್ಕಿ ಲಯನ್ಸ್ ಕ್ಲಬ್ ,ಮುಲ್ಕಿ ಪೊಲೀಸ್ ಠಾಣೆ ಹಾಗೂ ಹೆಜಮಾಡಿ ಕರಾವಳಿ ಕಾವಲು ಪಡೆಯ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ದಿನಾಚರಣೆ
Wednesday, July 26, 2023
ಮುಲ್ಕಿ: ಮುಲ್ಕಿ ಲಯನ್ಸ್ ಕ್ಲಬ್ ,ಮುಲ್ಕಿ ಪೊಲೀಸ್ ಠಾಣೆ ಹಾಗೂ ಹೆಜಮಾಡಿ ಕರಾವಳಿ ಕಾವಲು ಪಡೆಯ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ದಿನಾಚರಣೆ ಲಯನ್ಸ್ ಕ್ಲಬ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶೀತಲ್ ಸುಶೀಲ್ ವಹಿಸಿದ್ದರು
ಡಿಸ್ಟ್ರಿಕ್ಟ್ ಕೋರ್ಡಿನೇಟರ್ ಪ್ರಶಾಂತ್ ಬಿ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿ ಕಾರ್ಗಿಲ್ ವಿಜಯ ದಿನಾಚರಣೆಯು ದೇಶ ಸೇವೆ ಮಾಡುತ್ತಿರುವ ಸೈನಿಕರಿಗೆ ಹಾಗೂ ಪೊಲೀಸರಿಗೆ, ಸಮಾಜ ಸೇವಕರಿಗೆ ಸಲ್ಲಿಸುವ ಗೌರವವಾಗಿದ್ದು ಯಾವುದೇ ಪರಿಸ್ಥಿತಿ ಬಂದರೂ ನಾವು ಎದುರಿಸಲು ಸನ್ನದ್ಧರಾಗಬೇಕು. ರಾಷ್ಟ್ರದ ರಕ್ಷಣೆ ಮಾಡುತ್ತಿರುವ ಸೈನಿಕರ ಬಗ್ಗೆ ಯುವ ಜನಾಂಗಕ್ಕೆ ತಿಳಿಸುವ ಕೆಲಸವಾಗಬೇಕು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ಎಸ್.ಐ.ಮಾರುತಿ, ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ದಾಮೋದರ್, ಎಸ್ಸೈ ಪುಷ್ಪಾ,ವಲಯಾಧ್ಯಕ್ಷ ಸುಜಿತ್ ಸಾಲ್ಯಾನ್, ಕೋಶಾಧಿಕಾರಿ ಶೋಭಾ ಸುಜಿತ್ ಸಾಲ್ಯಾನ್, ಕಾರ್ಯದರ್ಶಿ ಕವನ್ ಕುಬೆವೂರು,ಲಿಯೋ ಕ್ಲಬ್ ನ ಅಧ್ಯಕ್ಷ ಸಿಯಾ ಸುಶೀಲ್,ಕಿಶೋರ್ ಶೆಟ್ಟಿ ಬಪ್ಪನಾಡು ಮತ್ತಿತರರು ಉಪಸ್ಥಿತರಿದ್ದರು.