-->

 ಕೆಜೆ ಹಳ್ಳಿ ಡಿಜೆ ಹಳ್ಳಿ ವಿದ್ವಾಂಸಕ ಹಿತೂರಿಗಳ ಕೇಸು ವಾಪಾಸ್ ಪಡೆದರೆ, ಭಯೋತ್ಪಾದನೆಗೆ ಪ್ರೋತ್ಸಾಹ ಕೊಟ್ಟಂತೆಡಾ. ಭರತ್ ಶೆಟ್ಟಿ

ಕೆಜೆ ಹಳ್ಳಿ ಡಿಜೆ ಹಳ್ಳಿ ವಿದ್ವಾಂಸಕ ಹಿತೂರಿಗಳ ಕೇಸು ವಾಪಾಸ್ ಪಡೆದರೆ, ಭಯೋತ್ಪಾದನೆಗೆ ಪ್ರೋತ್ಸಾಹ ಕೊಟ್ಟಂತೆಡಾ. ಭರತ್ ಶೆಟ್ಟಿ



ಮಂಗಳೂರು:ಇಡೀ ರಾಜ್ಯವನ್ನೇ ಬಿಚ್ಚಿಬಿಳಿಸಿದ್ದ  ಕೆ ಜೆ ಹಳ್ಳಿ ಡಿಜೆ ಹಳ್ಳಿಯಲ್ಲಿ ನಡೆದ ವಿದ್ವಾಂಸಕ ಕೃತ್ಯ ದಲ್ಲಿ ಭಾಗಿಯಾದ ಆರೋಪಿಗಳ ಮೊಕದ್ದಮ್ಮೆ ವಾಪಾಸ್ 
ಪಡೆಯಲು ಶಾಸಕ ತನ್ವೀರ್ ಸೇಠ್ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದಿದ್ದು ಒಂದು ವೇಳೆ ಕೇಸ್ ಹಿಂಪಡೆದರೆ   ರಾಜ್ಯ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕ ಚಟುವಟಿಕೆಗೆ ಮತ್ತು  ವಿದ್ವಾಂಸಕ ಕೃತ್ಯಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ವಿದ್ವಾಂಸಕ ಪ್ರಕರಣ ದೇಶ ಮಾತ್ರ ಅಲ್ಲ ಅಂತರಾಷ್ಟ್ರೀಯವಾಗಿ ಕಳವಳಕ್ಕೆ ಕಾರಣವಾಗಿತ್ತು.
ಸ್ವತಹ ಕಾಂಗ್ರೆಸ್ ಶಾಸಕರು ಒಬ್ಬರ ಮನೆಯನ್ನ ಬೆಂಕಿ ಹಚ್ಚಿ ಸುಡಲಾಗಿತ್ತು.ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ಗಲಭೆಗೆ ಕಾರಣವಾಗಿತ್ತು.
ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಯೋತ್ಪಾದಕ ಚಟುವಟಿಕೆಯ ಸ್ಲೀಪರ್ ಸೆಲ್ಗಳ ಕೈವಾಡವಿದೆ ಎಂಬುದ ಬಗ್ಗೆಯೂ ದೇಶದ ಪ್ರಮುಖ ತನಿಕ ಏಜೆನ್ಸಿಗಳು ಮಾಹಿತಿ ಕಲೆ ಹಾಕುತ್ತಿರುವುದರ ನಡುವೆ ಕಾಂಗ್ರೆಸ್ ಶಾಸಕರು ಬೇಜವಾಬ್ದಾರಿಯುತವಾಗಿ
ಮುಖದ್ದಮೆಯನ್ನು ವಾಪಸ್ ಪಡೆಯಲು ಒತ್ತಡ ಹೇರುತ್ತಿರುವುದು ಕಂಡನಿಯ.
ಮುಂದಿನ ದಿನಗಳಲ್ಲಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಮತ್ತಷ್ಟು ವಿದ್ವಾಂಸಕೃತ್ಯ ನಡೆಸಿದ್ದೆಯಾದಲ್ಲಿ ಕಾಂಗ್ರೆಸ್ ಪಕ್ಷ ಜವಾಬ್ದಾರಿಯನ್ನ ಹೊರಬೇಕು ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807