ಸಾಮಾಜಿಕ ಕ್ಷೇತ್ರದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಲು ಸರಕಾರಿ ಅಧಿಕಾರಿಗಳ ಕರ್ತವ್ಯ ಮಹತ್ವದ್ದಾಗಿದೆ - ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
Monday, July 10, 2023
ಸಾಮಾಜಿಕ ಕ್ಷೇತ್ರದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಲು ಸರಕಾರಿ ಅಧಿಕಾರಿಗಳ ಕರ್ತವ್ಯ ಮಹತ್ವದ್ದಾಗಿದ್ದು ಅಧಿಕಾರಿಗಳು ನಿಷ್ಠಾವಂತರಾಗಿದ್ದರೆ ಜನಮನ್ನಣೆ ಗಳಿಸುತ್ತಾರೆ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಬೆಂಗಳೂರಿನ ತಮ್ಮ ಆಶ್ರಮದಲ್ಲಿ ಸರ್ಕಾರ ನಿಯೋಜಿಸಿದ ನಿಷ್ಠಾವಂತ ಭದ್ರತಾಧಿಕಾರಿ ಪ್ರದೀಪ್ ಗೌಡ ರವರನ್ನ ತಮ್ಮ ಆಶ್ರಮದ ವತಿಯಿಂದ ಗೌರವಿಸಿ ಮಾತನಾಡಿದರು.
ಈ ಸಂದರ್ಭ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿಸಿ ಭಟ್ ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಪುನೀತ್ ಕೃಷ್ಣ , ಗುರುಪ್ರಸಾದ್ ಭಟ್ ಮುಂಡ್ಕೂರು ಮತ್ತಿತರರು ಉಪಸ್ಥಿತರಿದ್ದರು. ಪುನೀತ್ ಕೃಷ್ಣ ನಿರೂಪಿಸಿದರು.