ಕುಪ್ಪೆಪದವಿನ ಶ್ರೀ ದುರ್ಗೇಶ್ವರಿ ದೇವಿಗೆ ದೃಡ ಕಲಶೋತ್ಸವ ಸಂಭ್ರಮ
Sunday, July 9, 2023
ಬಜಪೆ:ಕುಪ್ಪೆಪದವಿನ ಶ್ರೀ ದುರ್ಗೇಶ್ವರಿ ದೇವಿಗೆ ದೃಡ ಕಲಶೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಬ್ರಹ್ಮ ಶ್ರೀ ವೇದಮೂರ್ತಿ ರಾಧಾಕೃಷ್ಣ ತಂತ್ರಿಗಳು ಎಡಪದವು ಇವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ ವೇದಮೂರ್ತಿ ಸದಾಶಿವ ಕಾರಂತ ಅವರ ಉಪಸ್ಥಿತಿಯಲ್ಲಿ ಕನ್ಯಾ ಲಗ್ನ ಸುಮೂರ್ತದಲ್ಲಿ ದೃಡ ಕಲಶೋತ್ಸವ ಸಂಪನ್ನಗೊಂಡಿತು.
ಸಂಪೂರ್ಣ ಜೀರ್ಣೋದ್ದಾರಗೊಂಡ ಶ್ರೀ ದುರ್ಗೆಶ್ವರೀ ದೇವಿ ದೇವಸ್ಥಾನದಲ್ಲಿ ಕಳೆದ ಫೆಬ್ರವರಿ 12 ರಂದು ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಜರಗಿತ್ತು.ದೇವಸ್ಥಾನದಲ್ಲಿ
ವಾಸ್ತು ಪೂಜೆ, ರಾಕ್ಶೋ ಘ್ನ ಹೋಮ, ದುರ್ಗಾ ಹೊಮಾದಿ ಹವನಗಳು ,ಪ್ರಧಾನ ಹೋಮಗಳು ನಡೆದ ಬಳಿಕ,ಕನ್ಯಾ ಲಗ್ನ ಮುಹೂರ್ತದಲ್ಲಿ ಋತ್ವಿಜರ ಮಂತ್ರಘೋಷಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ದೃಡ ಕಲಶಾಭಿಷೇಕ ನೆರವೇರಿತು.ನಂತರ
ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.
ಬಲ್ಯೊಟ್ಟು ಮಠದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ದೇವಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಪ್ರವೀಣ್ ಕುಮಾರ್ ಅಗರಿ, ಉಪ ಮ್ಯಾನೇಜಿಂಗ್ ಟ್ರಷ್ಟಿ ತುಳಸಿ ದಾಸ್ ಅಮೀನ್, ಟ್ರಷ್ಟಿಗಳು, ಉಪಸಮಿತಿಯ ಸದಸ್ಯರುಗಳು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್,ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಸಮಿತಿಯ ಪದಾಧಿಕಾರಿಗಳು, ಸದಸ್ಯರು,ಬ್ರಹ್ಮ ಕಲಶೋತ್ಸವದ ಉಪಸಮಿತಿಗಳ ಸಂಚಾಲಕರು, ಸಹ ಸಂಚಾಲಕರು, ಸದಸ್ಯರುಗಳು, ಮುತ್ತೂರು ಮತ್ತು ಕುಪ್ಪೆಪದವು ಗ್ರಾಮ ಪಂಚಾಯತ್ ಗಳ ಸದಸ್ಯರುಗಳು, ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮಗಳ ಪ್ರಮುಖರು, ಸಂಘ-ಸಂಸ್ಥೆಗಳ ಪ್ರಮುಖರು, ಭಕ್ತಾದಿಗಳು, ದೇವಸ್ಥಾನದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.