-->


ತೋಕೂರು : ಧ್ವಜಾರೋಹಣ, ನಾಗಬಿಂಬ, ಕಾಂತೇರಿ ಧೂಮಾವತಿ ದೈವಪ್ರತಿಷ್ಠೆ

ತೋಕೂರು : ಧ್ವಜಾರೋಹಣ, ನಾಗಬಿಂಬ, ಕಾಂತೇರಿ ಧೂಮಾವತಿ ದೈವಪ್ರತಿಷ್ಠೆ

 ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠೆ ಬ್ರಹ್ಮಕುಂಭಾಷೇಕ ಮತ್ತು ನಾಗಮಂಡಲೋತ್ಸವದ ಪ್ರಯುಕ್ತ ದೇವಳದ ನೂತನ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನಡೆದು, ಶ್ರೀ ನಾಗದೇವರ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ ನಡೆದು, ವಿವಿಧ ಹೋಮಗಳೊಂದಿಗೆ ಶ್ರೀ ಕಾಂತೇರಿ ಧೂಮಾವತಿ ದೈವಪ್ರತಿಷ್ಠೆ ಕಲಶಾಭಿಷೇಕ ಜರಗಿತು. ಶ್ರೀ ಮಹಾಗಣಪತಿ ಹಾಗೂ ಶ್ರೀ ದುರ್ಗಾದೇವಿಗೆ ಕಲಶಾಧಿವಾಸ, ಉತ್ಸವಬಲಿ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಶಿಬರೂರು ಗೋಪಾಲಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಅರ್ಚಕ ಮಧುಸೂಧನ ಆಚಾರ್ಯ ಅವರು ಸಹಕರಿಸಿದರು. 
ಬೆಳಿಗ್ಗೆ ಹಾಗೂ ಮಧ್ಯಾಹ್ನ ಸುಮಾರು 10 ಸಾವಿರ ಮಂದಿಗೆ ಉಪಹಾರ ಮತ್ತು ಅನ್ನಪ್ರಸಾದವನ್ನು ವಿತರಿಸಲಾಯಿತು. ವಿವಿಧ ಸ್ವಯಂ ಸೇವಕರು ಈ ವ್ಯವಸ್ಥೆಯಲ್ಲಿ ತಮ್ಮ ಸೇವಾ ಮನೋಭಾವನೆಯೊಂದಿಗೆ ತೊಡಗಿಸಿಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮವು ಸ್ವಂದ ಮಂಟಪದಲ್ಲಿ ವಿವಿಧ ಸಂಘ ಸಂಸ್ಥೆಗಳು ಪ್ರಾಯೋಜಿಸಿದ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು. ಜಾತ್ರಾ ಸಂಭ್ರಮದ ವಾತಾವರಣದಲ್ಲಿ ಮಕ್ಕಳಿಗೆ ಹಾಗೂ ಬಂದಂತಹ ಭಕ್ತರಿಗೆ ವಿವಿಧ ಮನೋರಂಜನಾ ಆಟಗಳ ಮೈದಾನಕ್ಕೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ ಅವರು ಚಾಲನೆ ನೀಡಿದರು. 
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಪಾಧ್ಯಕ್ಷ ಮೋಹನ್‌ದಾಸ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್, ಸದಸ್ಯರಾದ ವಿಜಯಕುಮಾರ್ ರೈ, ಟಿ.ಪುರುಷೋತ್ತಮ ರಾವ್, ಲೋಕಯ್ಯ ಕೆ. ಸಾಲ್ಯಾನ್, ವಿಪುಲ ಡಿ. ಶೆಟ್ಟಿಗಾರ್, ಶಾರದಾ ಜಿ. ಬಂಗೇರ, ವಿಶ್ವನಾಥ್, ಯೋಗೀಶ್ ಆರ್. ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಣ್ಣ ದೇವಾಡಿಗ, ಅನಂತರಾಮ ಶಿಮಂತ್ರಾಯ, ಆರ್.ಎನ್.ಶೆಟ್ಟಿಗಾರ್, ಗಂಗಾಧರ ಶೆಟ್ಟಿ, ಗುರುರಾಜ್ ಎಸ್. ಪೂಜಾರಿ, ದೇವಿದಾಸ ಶೆಟ್ಟಿ ಕಿನ್ನಿಗೋಳಿ, ರತ್ನಾಕರ ಶೆಟ್ಟಿಗಾರ್, ಸಂಪತ್ ದೇವಾಡಿಗ, ಧನಂಜಯ ಶೆಟ್ಟಿಗಾರ್, ಸಂತೋಷ್‌ಕುಮಾರ್, ದಿನಕರ್ ಸಾಲ್ಯಾನ್, ಹಿಮಕರ್, ನವೀನ್ ಶೆಟ್ಟಿಗಾರ್, ಸಂತೋಷ್ ದೇವಾಡಿಗ, ನಾರಾಯಣ ಸುವರ್ಣ, ಧರ್ಮಾನಂದ ಶೆಟ್ಟಿಗಾರ್, ಗಣೇಶ್ ದೇವಾಡಿಗ, ವರುಣ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article